Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ವಿರಾಟ್ ಕೊಹ್ಲಿಯಂತೆ ಆಗುವುದು ನನ್ನ ಗುರಿ': ಲಕ್ಷ್ಯ ಸೇನ್

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಅದ್ಭುತ ಪ್ರದರ್ಶನ ನೀಡಿದ್ದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ಭಾರತದ ಮೊದಲ ಪುರುಷ ಷಟ್ಲರ್ ಎಂಬ ದಾಖಲೆಯನ್ನು ಮಾಡಿದ್ದರು.

ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ಲಕ್ಷ್ಯ ಸೇನ್ ಸೋಲು ಕಂಡಿದ್ದರು. ನಂತರ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಕಂಚಿನ ಪದಕದ ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದರು.

Lakshya Sen said My goal is to become like Virat Kohli

ಇದೀಗ ಲಕ್ಷ್ಯ ಸೇನ್ ಅವರು ತಮ್ಮ ಮುಂದಿನ ಗುರಿ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯಂತೆ ಆಗುವುದು ನನ್ನ ಗುರಿ ಎಂದು ಹೇಳಿದ್ದಾರೆ.

'ದಿ ರಣವೀರ್ ಶೋ' ಸಂದರ್ಶನದಲ್ಲಿ ಮಾತನಾಡಿರುವ ಲಕ್ಷ್ಯ ಸೇನ್, ನಾನು ವಿರಾಟ್ ಕೊಹ್ಲಿಯ ಅಭಿಮಾನಿ ದೊಡ್ಡ ಅಭಿಮಾನಿ. ಮುಂದಿನ ದಿನಗಳಲ್ಲಿ ಭಾರತೀಯ ಬ್ಯಾಡ್ಮಿಂಟನ್‌ನ ವಿರಾಟ್ ಕೊಹ್ಲಿಯಾಗಲು ಬಯಸುತ್ತೇನೆ. ಅವರು ದೊಡ್ಡ ಕ್ರೀಡಾ ಐಕಾನ್‌ಗಳಲ್ಲಿ ಒಬ್ಬರು. ಅವರು ಭಾರತೀಯ ಕ್ರಿಕೆಟ್‌ಗಾಗಿ ಸಾಕಷ್ಟು ಕೊಡೆಗೆ ನೀಡಿದ್ದಾರೆ ಎಂದಿದ್ದಾರೆ.

ನನಗೆ ಅವರು ಸ್ಫೂರ್ತಿ

ಇದೇ ವೇಳೆ ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ ಚಿನ್ನದ ಪದಕ ವಿಜೇತ ವಿಕ್ಟರ್ ಆಕ್ಸೆಲ್ಸೆನ್ ಅವರೊಂದಿಗಿನ ಸ್ನೇಹ ಸಂಬಂಧಗಳ ಬಗ್ಗೆಯೂ ಲಕ್ಷ್ಯ ಸೇನ್ ಮಾತನಾಡಿದ್ದಾರೆ. "ವಿಕ್ಟರ್ ಆಕ್ಸೆಲ್ಸೆನ್ ಅವರು ನನಗೆ ಸ್ಫೂರ್ತಿ. ಅವರು ಕೋರ್ಟ್‌ ಒಳಗೆ ಮತ್ತು ಹೊರಗೆ ಒಂದೇ ರೀತಿ ನಡೆದುಕೊಳ್ಳುತ್ತಾರೆ.

ನಾನು ಅವರೊಂದಿಗೆ ಎರಡು ವಾರಗಳ ಕಾಲ ತರಬೇತಿ ಪಡೆದಿದ್ದೇನೆ. ಅಲ್ಲಿ ನನಗೆ ಅವರೊಂದಿಗೆ ಆಡಲು ಮತ್ತು ಅಭ್ಯಾಸ ಮಾಡಲು ಅವಕಾಶ ಸಿಕ್ಕಿತು. ಸೆಮಿಫೈನಲ್‌ನಲ್ಲಿ ಅವರ ವಿರುದ್ಧ ಆಡಿರುವುದು ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದ್ದಾರೆ.

Story first published: Thursday, August 29, 2024, 22:50 [IST]
Other articles published on Aug 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+