For Quick Alerts
ALLOW NOTIFICATIONS  
For Daily Alerts

Hong Kong Open: ಫೈನಲ್‌ನಲ್ಲಿ ಭಾರತೀಯ ಆಟಗಾರರಿಗೆ ಸೋಲು

ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರರಾದ ಲಕ್ಷ್ಯ ಸೇನ್ ಹಾಗೂ ಪುರಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯ್‌ ರಾಜ್‌ ರಿಂಕು ರೆಡ್ಡಿ ಹಾಗೂ ಚಿರಾಗ್‌ ಜೋಡಿ ಹಾಂಗ್‌ ಕಾಂಗ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡಿದೆ. ಈ ಮೂಲಕ ಭಾರತೀಯ ಜೋಡಿ ರನ್ನರ್‌ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟಿದೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ಲಕ್ಷ್ಯ ಸೇನ್‌ ಎರಡು ನೇರ ಸೆಟ್‌ಗಳಲ್ಲಿ ಚೀನಾದ ಲಿ ಶೈ ಫೆಂಗ್ ಅವರ ವಿರುದ್ಧ ಸೋಲು ಕಂಡಿತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಲಕ್ಷ್ಯ ಸೇನ್‌ ಮೊದಲ ಗೇಮ್‌ನಲ್ಲಿ 15-21 ರಿಂದ ಸೋಲು ಕಂಡರೆ, ಎರಡನೇ ಗೇಮ್‌ನfಲಿ 12-21 ರಿಂದ ಚೀನಾ ಆಟಗಾರ ವಿರುದ್ಧ ಆಘಾತಕ್ಕೆ ಒಳಗಾದರು. ಕೇವಲ 45 ನಿಮಿಷ ನಡೆದ ಫೈನಲ್‌ ಪಂದ್ಯದಲ್ಲಿ ಲಕ್ಷ್ಯ ಸೇನ್‌ ರನ್ನರ್‌ ಅಪ್‌ ಪ್ರಶಸ್ತಿ ತನ್ನದಾಗಿಸಿಕೊಂಡರು.

Lakshya Sen Satwik-Chirag pair finish as runners-up at Hong Kong Open Badminton Tournament

ಪುರುಷರ ಡಬಲ್ಸ್‌ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್‌ ರಿಂಕು ರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಸಹ ಮೊದಲ ಗೇಮ್‌ನಲ್ಲಿ ಜಯ ಸಾಧಿಸಿದರೂ, ಪಂದ್ಯವನ್ನು ಸೋತರು. ಭಾರತದ ಜೋಡಿ ಚೀನಾದ ಲಿಯಾಂಗ್ ವೈ ಕಿಂಗ್ ಹಾಗೂ ವಾಂಗ್‌ ಚಾಂಗ್‌ ವಿರುದ್ಧ ನಿರಾಸೆ ಅನುಭವಿಸಿತು. ಚಿರಾಗ್ ಹಾಗೂ ಸಾಯಿ ರಾಜ್‌ ಜೋಡಿ 1 ಗಂಟೆ 2 ನಿಮಿಷದ ವರೆಗೆ ಸೋಲನ್ನು ಸುಲಭವಾಗಿ ಒಪ್ಪಲು ಸಿದ್ಧರಿರಲಿಲ್ಲ. ಆದರೆ ಕೊನೆಯಲ್ಲಿ ಚೀನಾ ಜೋಡಿ ಮನಮೋಹಕ ಆಟದ ಪ್ರದರ್ಶನ ನೀಡಿ ಪ್ರಶಸ್ತಿಗೆ ಮುತ್ತಿಟ್ಟಿತು.

ಭರ್ಜರಿ ಪ್ರದರ್ಶನ

ಮೊದಲ ಗೇಮ್‌ನಲ್ಲಿ ಭಾರತದ ಜೋಡಿ ಅಮೋಘ ಸ್ನ್ಯಾಷ್ ಹಾಗೂ ಗ್ಯಾಪ್‌ ಶಾಟ್‌ಗಳನ್ನು ಪ್ರಯೋಗಿಸಿ ಅಂಕಗಳನ್ನು ಬಾಚಿಕೊಂಡಿತು. ಆದರೆ ಎರಡನೇ ಗೇಮ್‌ನಲ್ಲಿ ಭಾರತೀಯ ಜೋಡಿಯ ನ್ಯೂನತೆಯನ್ನು ಅರಿತು ಆಡಿದ ಚೀನಾ ಜೋಡಿ ನಿರಾಸೆ ಅಬ್ಬರಿಸಿತು. ಈ ಪಂದ್ಯದ ಯಾವುದೇ ಹಂತದಲ್ಲಿ ಭಾರತದ ಜೋಡಿ ಚೀನಾ ಜೋಡಿ ಸವಾಲು ಎಸೆಯಲೆ ಇಲ್ಲ. ಪರಿಣಾಮ ಪಂದ್ಯವನ್ನು ಕೈ ಚೆಲ್ಲಿತು.

Lakshya Sen Satwik-Chirag pair finish as runners-up at Hong Kong Open Badminton Tournament

ಕೊನೆಯ ಹಾಗೂ ಮೂರನೇ ಗೇಮ್‌ನಲ್ಲಿ ಭಾರತದ ಜೋಡಿ ಪುಟಿದೇಳುವ ಸೂಚನೆಯನ್ನು ಹೊಂದಿತ್ತು. ಆದರೆ ಚೀನಾ ಜೋಡಿ ಅದಾಗಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಈ ಅವಧಿಯಲ್ಲಿ ಭಾರತೀಯ ಜೋಡಿ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿತು. ಪರಿಣಾಮ ಚೀನಾದ ಜೋಡಿ ಸುಲಭವಾಗಿ ಪಂದ್ಯವನ್ನು ಗೆದ್ದು ಪ್ರಶಸ್ತಿಗೆ ಮುತ್ತಿಟ್ಟಿತು. ಒಟ್ಟಾರೆ ಈ ಜೋಡಿ 10 ಬಾರಿ ಅಂಗಳದಲ್ಲಿ ಮುಖಾಮುಖಿ ಆಗಿದ್ದು, ಚೀನಾ ಜೋಡಿ 7 ಬಾರಿ ಜಯ ಸಾಧಿಸಿದೆ.

Story first published: Sunday, September 14, 2025, 18:50 [IST]
Other articles published on Sep 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+