ಬರ್ಮಿಂಗ್ಹ್ಯಾಮ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಭರ್ಜರಿ ಆರಂಭವನ್ನು ಮಾಡಿದ್ದಾರೆ. ಮಾರ್ಚ್ 3 ರಿಂದ ಆರಂಭವಾದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ ತಮಗಿಂತ ಹೆಚ್ಚಿನ ಶ್ರೇಯಾಂಕಿತ ಆಟಗಾರ ಚೀನಾದ ಶಿ ಯುಕಿಯನ್ನು ಮಣಿಸಿ ಅಬ್ಬರಿಸಿದರು. ಈ ಪಂದ್ಯದಲ್ಲಿ ಲಕ್ಷ್ಯ ಸೇನ್ 2-1 ರಿಂದ ಜಯ ಸಾಧಿಸಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಭಾರತೀಯ ಸ್ಟಾರ್ ಶೆಟ್ಲರ್ ಲಕ್ಷ್ಯ ಸೇನ್ ಚೀನಾದ ವಿಶ್ವದ ನಂಬರ್ 1 ಆಟಗಾರ ಶಿ ಯುಕಿ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಲಕ್ಷ್ಯ ಸೇನ್ ಆರಂಭದಿಂದಲೂ ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿದ್ದರು. ಅಲ್ಲದೆ 6-6 ರಿಂದ ಸಮಬಲ ಸಾಧಿಸಿದರು. ಇನ್ನು ಈ ಅವಧಿಯಲ್ಲಿ ಲಕ್ಷ್ಯ 11-7 ರಿಂದ ಮುನ್ನಡೆ ಸಾಧಿಸಿ ಅಬ್ಬರಿಸಿದರು.

ಮೊದಲ ಗೇಮ್‌ನ ಕೊನೆಯ ವರೆಗೂ ಲಕ್ಷ್ಯ ಸೇನ್ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು. ಈ ಅವಧಿಯಲ್ಲಿ ಅವರು ಅಂಕಗಳಿಕೆಯಲ್ಲಿ ಹಿನ್ನಡೆ ಕಂಡರು. ಈ ವೇಳೆ ದಿಟ್ಟ ಪ್ರದರ್ಶನ ನೀಡಿದ ಲಕ್ಷ್ಯ ಸೇನ್ ಅಮೋಘ ಪ್ರದರ್ಶನ ನೀಡಿ ಮೊದಲ ಗೇಮ್ ಗೆದ್ದರು. ಈ ಪಂದ್ಯದಲ್ಲಿ ಲಕ್ಷ್ಯ ಸೇನ್ 23-21 ರಿಂದ ಜಯ ಸಾಧಿಸಿದರು. ಅಲ್ಲದೆ 1-0 ಮುನ್ನಡೆ ಕಾಯ್ದುಕೊಂಡರು.
ಅಬ್ಬರಿಸಿದ ಲಕ್ಷ್ಯ ಸೇನ್
ಎರಡನೇ ಗೇಮ್‌ನ ಆರಂಭದಿಂದಲೂ ಲಕ್ಷ್ಯ ಸೇನ್ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು. ಈ ಅವಧಿಯಲ್ಇ ಅವರು ಎದುರಾಳಿ ಆಟಗಾರನ ತಂತ್ರವನ್ನು ಮೆಟ್ಟಿನಿಲ್ಲಲು ಸಾಧ್ಯವಾಗಲಿಲ್ಲ. ಕಾರಣ ಅವರು ಸುಲಭವಾಗಿ ಅಂಕಗಳನ್ನು ಬಿಟ್ಟುಕೊಟ್ಟ ಪಂದ್ಯವನ್ನು ಸೋತರು. ಈ ಪಂದ್ಯವನ್ನು ಚೀನಾ ಆಟಗಾರ 21-19 ರಿಂದ ಗೆದ್ದಿದ್ದರು.
ಮೂರನೇ ಗೇಮ್ ಸಹ ಜಿದ್ದಾಜಿದ್ದಿನಿಂದ ಕೂಡಿತ್ತು. ಈ ಹಂತದಲ್ಲಿ ಉಭಯ ಆಟಗಾರರು ಸಹ ಮನಮೋಕ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಸಮಬಲ ಸಾಧಿಸಿದರು. ಈ ಅವಧಿಯಲ್ಲಿ 8-8 ಅಂಕಗಳಿಂದ ಸಮಬಲ ಸಾಧಿಸಿದರು. ಅಲ್ಲದೆ 12-10 ಅಂಕಗಳಿಂದ ಜಿದ್ದಾಜಿದ್ದಿನ ಪ್ರದರ್ಶನ ನೀಡಿದರು. ಆದರೆ ಇಲ್ಲಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಲಕ್ಷ್ಯ ಸೇನ್ 21-17 ರಿಂದ ಪಂದ್ಯ ಗೆದ್ದು ಅಬ್ಬರಿಸಿದರು.
ಪಿವಿ ಸಿಂಧು ಸಹ ಈ ಟೂರ್ನಿಯಲ್ಲಿ ಭಾಗವಹಿಸಬೇಕಿತ್ತು. ಆದರೆ ಸಿಂಧು ಇಂಗ್ಲೆಂಡ್ ಹೋಗುವಾಗ ದುಬೈನಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ಇವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಲು ಆಗಿರಲಿಲ್ಲ.