Paris Olympic 2024: ಒಲಿಂಪಿಕ್ಸ್‌ನಲ್ಲಿ ಪದಕದತ್ತ ತನ್ನ "ಲಕ್ಷ್ಯ" ಧೃಡ ಪಡಿಸಿದ ಸೇನ್
ಆಗಸ್ಟ್ 1 ಗುರುವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಭಾರತದ ಮತ್ತೊರ್ವ ಸ್ಟಾರ್ ಷಟ್ಲರ್ ಎಚ್ ಎಸ್ ಪ್ರಣಯ್ ವಿರುದ್ಧ 21-12, 21-6 ಅಂಕಗಳೊಂದಿಗೆ ಸೇನ್ ಗೆಲುವಿನ ನಗೆ ಬೀರಿದರು. ಪಂದ್ಯ ಪ್ರಾರಂಭವಾದ 40 ನಿಮಿಷಗಳಲ್ಲಿ ಜಯ ಕಂಡ ಸೇನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಲಕ್ಷ್ಯ ಈಗ 16ರ ಸುತ್ತಿಗೆ ತಲುಪಿದ್ದು, ಮುಂದಿನ ಪಂದ್ಯದಲ್ಲಿ ಚೀನದ ತೈಪೆಯ ಚೌ ತಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ.
ಲಕ್ಷ್ಯ ಅವರು ಪರುಪಳ್ಳಿ ಕಶ್ಯಪ್ ಮತ್ತು ಕಿಡಂಬಿ ಶ್ರೀಕಾಂತ್ ನಂತರ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ಗೆ ತಲುಪಿದ ಮೂರನೇ ಭಾರತೀಯ ಪುರುಷ ಷಟ್ಲರ್ ಆಗಿದ್ದಾರೆ. ಕಶ್ಯಪ್ ಮತ್ತು ಶ್ರೀಕಾಂತ್ 2012 ಮತ್ತು 2016 ರ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಕೊನೆಯ 8 ಕ್ಕೆ ತಲುಪಿದ್ದರು.
ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಮೂರು ಕಂಚಿನ ಪದಕಗಳನ್ನು ಗೆದ್ದಿದೆ ಮತ್ತು ಭಾರತೀಯ ಅಭಿಮಾನಿಗಳು ಬ್ಯಾಡ್ಮಿಂಟನ್‌ನಲ್ಲಿ ಕನಿಷ್ಠ ಒಂದು ಪದಕದ ನಿರೀಕ್ಷೆಯಲ್ಲಿದ್ದಾರೆ.
ಕೆಲ ಸಮಯದ ಹಿಂದೆ ಪ್ರಣಯ್ ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಪ್ರಣಯ್ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಪ್ರಸ್ತುತ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಹೊರಗುಳಿದ ನಂತರ, ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ ಲಕ್ಷ್ಯ ಕ್ವಾರ್ಟರ್ ಫೈನಲ್‌ಗೆ ತಲುಪಿರುವುದು ಭಾರತಕ್ಕೆ ಸಂತೋಷದ ಸುದ್ದಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications