Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಒಲಿಂಪಿಕ್ಸ್‌ನಲ್ಲಿ ಹೊಸ ಇತಿಹಾಸ ಬರೆದ ಲಕ್ಷ್ಯ ಸೇನ್!

ಆಗಸ್ಟ್‌ 2 ಶುಕ್ರವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಭರ್ಜರಿ ಜಯ ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ 19-21, 21-15, 21-12 ಸೆಟ್‌ಗಳ ಅಂತರಗಳಿಂದ ಲಕ್ಷ್ಯ ಸೇನ್ ಗೆದ್ದು ಬೀಗಿದ್ದಾರೆ. ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್‌ ಹೊಸ ಇತಿಹಾಸ ಸೃಷ್ಟಿಸಿದ್ದು, ಭಾರತಕ್ಕೆ ಪದಕ ಗೆಲ್ಲುವ ಕನಸು ಕಂಡಿದ್ದಾರೆ.

Lakshyasen reached Semifinal in Paris Olympics 2024

ಲಕ್ಷ್ಯ ಸೇನ್ ಮೊದಲ ಸೆಟ್‌ನಲ್ಲಿ ಸೋತ ನಂತರ ಅತ್ಯುತ್ತಮ ಪುನರಾಗಮನ ಮಾಡಿ ಕೊನೆಯ 2 ಸೆಟ್‌ಗಳನ್ನು ಗೆದ್ದು ಸೆಮಿಫೈನಲ್ ಎಂಟ್ರಿ ಕೊಟ್ಟಿದ್ದಾರೆ. ಲಕ್ಷ್ಯ ಸೇನ್ ಎದುರು ತೈಪೆಯ ಚೌ ಟಿಯೆನ್ ಚೆನ್ ಅವರು ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ.

ಈ ಗೆಲುವಿನೊಂದಿಗೆ 22 ವರ್ಷದ ಷಟ್ಲರ್ ಲಕ್ಷ್ಯಸೇನ್‌ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಮೊದಲ ಸೆಟ್‌ನಲ್ಲಿ 19-21 ರಿಂದ ಸೋಲನುಭವಿಸಬೇಕಾಯಿತು.

ಇದಾದ ಬಳಿಕ ಎರಡನೇ ಸೆಟ್‌ನಲ್ಲಿ 21-15 ಮತ್ತು ಮೂರನೇ ಸೆಟ್‌ನಲ್ಲಿ 21-12ರಲ್ಲಿ ಲಕ್ಷ್ಯ ಗೆಲುವು ಸಾಧಿಸಿದರು. ಈಗ ಸೇನ್‌ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತಕ್ಕಾಗಿ ಆಡುವ ಮೊದಲ ಭಾರತೀಯ ಷಟ್ಲರ್ ಆಗಲಿದ್ದಾರೆ.

ಸೆಮಿಫೈನಲ್‌ ಎದುರಾಳಿ ಯಾರು?

ಕಾಮನ್‌ವೆಲ್ತ್ ಚಾಂಪಿಯನ್ ಲಕ್ಷ್ಯ ಲಕ್ಷ್ಯ ಸೇನ್ ಅವರು ಸೆಮಿಫೈನಲ್‌ನಲ್ಲಿ ಯಾರನ್ನು ಎದುರಿಸಲಿದ್ದಾರೆ ಎಂಬುದು ಇನ್ನು ನಿರ್ಧಾರವಾಗಿಲ್ಲ. ಆದರೆ, 2021 ರ ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕೀನ್ ಯೂ ಮತ್ತು ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ನಡುವಿನ ಪಂದ್ಯದ ವಿಜೇತರ ವಿರುದ್ಧ ಸೇನ್‌ ಸೆಣಸಾಡಲಿದ್ದಾರೆ.

ಭಾರತದ ಪರ ಒಲಿಂಪಿಕ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಈವೆಂಟ್‌ನಲ್ಲಿ ಪರುಪಳ್ಳಿ ಕಶ್ಯಪ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್‌ಫೈನಲ್ ಪ್ರವೇಶ ಪಡೆದಿದ್ದರು. ಇದೀಗ ಲಕ್ಷ್ಯ ಸೇನ್ ತನ್ನ ಪ್ರಯಾಣವನ್ನು ಪ್ಯಾರಿಸ್‌ನಲ್ಲಿ ಸೆಮಿಫೈನಲ್‌ವರೆಗೆ ಮುಂದುವರೆದಿರುವ ಸಾಧನೆಯಾಗಿದೆ.

Story first published: Friday, August 2, 2024, 23:10 [IST]
Other articles published on Aug 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+