Paris Olympics 2024: ಚಿನ್ನ ಗೆದ್ದ ಚೀನಾ ಷಟ್ಲರ್‌ಗೆ ಲವ್ ಪ್ರಪೋಸ್; ವಿಡಿಯೋ ವೈರಲ್!
ಆಗಸ್ಟ್ 3 ಶನಿವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರ ಏಳನೇ ದಿನ ಪ್ರೀತಿ ತುಂಬಿದ ದೃಶ್ಯ ಕಂಡು ಬಂದಿದೆ. ಶುಕ್ರವಾರ ಚೀನಾದ ಬ್ಯಾಡ್ಮಿಂಟನ್ ಆಟಗಾರ ಲಿಯು ಯುಚೆನ್, ಚಿನ್ನದ ಪದಕ ಗೆದ್ದ ನಂತರ ತನ್ನ ಶಟ್ಲರ್ ಗೆಳತಿ ಹುವಾಂಗ್ ಯಾಕಿಯಾಂಗ್ ಅವರಿಗೆ ಪ್ರಪೋಸ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಕಿಮ್ ವೊನ್-ಹೊ ಮತ್ತು ಜಿಯೊಂಗ್ ನಾ-ಯುನ್ ಜೋಡಿಯನ್ನು 21-8, 21-11 ರಿಂದ ಝೆಂಗ್ ಸಿವೆಯ್ ಮತ್ತು ಹುವಾಂಗ್ ಯಾಕಿಯಾಂಗ್ ಅವರು ಸೋಲಿಸಿ ಚಿನ್ನದ ಪದಕ ಗೆದ್ದರು.

ಇದಾದ ಬಳಿಕ ಚೀನಾದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ ಲಿಯು ಯುಚೆನ್ ಅವರು ಮಿಶ್ರ ಡಬಲ್ಸ್ ಆಟಗಾರ್ತಿ ಹುವಾಂಗ್ ಯಾಕಿಯಾಂಗ್ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಪದಕ ಪ್ರದಾನದ ನಂತರ ಲಿಯು ಹೂಗಳೊಂದಿಗೆ ಹುವಾಂಗ್‌ಗಾಗಿ ಕಾಯುತ್ತಿದ್ದರು.
ಈ ವೇಳೆ ಅಲ್ಲಿಗೆ ಬಂದ ಹುವಾಂಗ್ ಅವರಿಗೆ ತನ್ನ ಪ್ರೀತಿ ಹೇಳಲು ಲಿಯು ಜೇಬಿನಿಂದ ಉಂಗುರು ತೆಗೆದು ಮುಂದದಾಗ ಆಶ್ಚರ್ಯಚಕಿತರಾದರು. ನಂತರ ಲಿಯು ಮಂಡಿಯೂರಿ ಉಂಗುರು ನೀಡುವ ಪ್ರಪೋಸ್ ಮಾಡಿದರು. ಕೂ ಬೆರಳಿಗೆ ಉಂಗುರು ಹಾಕಿಕೊಂಡು ಲಿಯು ಅವರ ಪ್ರೀತಿಗೆ ಹುವಾಂಗ್ ಗ್ರೀನ್ ಸಿಗ್ನಲ್ ಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications