ಮ್ಯಾಡ್ರೀಡ್ ಮಾಸ್ಟರ್ಸ್ 2023: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್

ಮ್ಯಾಡ್ರಿಡ್ ಮಾಸ್ಟರ್ಸ್ 2023ನೇ ಆವೃತ್ತಿಯ ಎರಡನೇ ಸುತ್ತಿನ ಎಲ್ಲಾ ಪಂದ್ಯಗಳು ಅಂತ್ಯವಾಗಿದೆ. ಭಾರತದ ಪರವಾಗಿ ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಮಾತ್ರವೇ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದು ಈ ಇಬ್ಬರು ಸ್ಟಾರ್ ಶಟ್ಲರ್‌ಗಳು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧು ಇಂಡೋನೇಷ್ಯಾದ ಆಟಗಾರ್ತಿ ಕುಸುಮಾ ವರ್ಧಿನಿ ವಿರುದ್ಧ ಗೆಲುವು ಸಾಧಿಸಿದರೆ ಕಿಡಂಬಿ ಶ್ರೀಕಾಂತ್ ಸಾಯಿ ಪ್ರಣೀತ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸಿದ್ದಾರೆ.
ಕುಸುಮಾ ವರ್ಧಿನಿ ಅವರನ್ನು ಪಿವಿ ಸಿಂಧು 21-14, 21-16 ಅಂತರದಿಂದ ನೇರ ಸೆಟ್‌ಗಳಲ್ಲಿ ಮಣಿಸಿ ಮ್ಯಾಡ್ರಿಡ್ ಮಾಸ್ಟರ್ಸ್ 2023ರ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿ ಕಿಡಂಬಿ ಶ್ರೀಕಾಂತ್ ಅವರು ಸಾಯಿ ಪ್ರಣೀತ್ ವಿರುದ್ಧ ನೇರ ಗೇಮ್ ಜಯ ಸಾಧಿಸಿದರು. ಆದರೆ ಭಾರತದ ಉಳಿದ ಶಟ್ಲರ್‌ಗಳಾದ ಕಿರಣ್ ಜಾರ್ಜ್, ಸಮೀರ್ ವರ್ಮಾ, ಆಕರ್ಷಿ ಕಶ್ಯಪ್ ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಇನ್ನು ಕಿಡಂಬಿ ಶ್ರೀಕಾಂತ್ ಈ ವರ್ಷ ಬಿಡಬ್ಲ್ಯೂಎಫ್ ಟೂರ್‌ನಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಐದನೇ ಶ್ರೇಯಾಂಕದ ಭಾರತೀಯ ಆಟಗಾರ ಸಾಯಿ ಪ್ರಣೀತ್ ಅವರನ್ನು ಎರಡನೇ ಸುತ್ತಿನಲ್ಲಿ 21-15, 21-12 ಸೆಟ್‌ಗಳಿಂದ ಮಣಿಸಿದರು. ಈ ಗೆಲುವಿನೊಂದಿಗೆ ಶ್ರೀಕಾಂತ್ ಹಾಗೂ ಸಾಯಿ ಪ್ರಣೀತ್ ಹೆಡ್ ಟು ಹೆಡ್ 5-5 ರಲ್ಲಿ ಸಮಗೊಂಡಿದೆ.
ಕಿರಣ್ ಜಾರ್ಜ್ ಮತ್ತು ಪ್ರಿಯಾಂಶು ರಾಜಾವತ್ ಅವರು ಎರಡನೇ ಸುತ್ತಿನ ಸೋಲಿನೊಂದಿಗೆ ಪುರುಷರ ಸಿಂಗಲ್ಸ್ ವಿಭಾಗದ ಸ್ಪರ್ಧೆಯಿಂದ ಹೊರಬಿದ್ದರು. ಜಾರ್ಜ್ 17-21, 12-21 ಅಂತರದಿಂದ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನೆಸೆನ್ ಸೋಲು ಕಂಡರು. ಈ ಸೆಣೆಸಾಟ ವಿರುದ್ಧ 31 ನಿಮಿಷಗಳಲ್ಲಿ ಅಂತ್ಯವಾಯಿತು. ಇನ್ನು ರಾಜಾವತ್ 14-21, 15-21 ಅಂತರದಿಂದ ಎಂಟನೇ ಶ್ರೇಯಾಂಕದ ಫ್ರಾನ್ಸ್‌ನ ತೋಮಾ ಜೂನಿಯರ್ ಪೊಪೊವ್ ವಿರುದ್ಧ ಸೋಲು ಕಂಡರು. ಸಮೀರ್ ವರ್ಮಾ ತಮ್ಮ ಪುರುಷರ ಸಿಂಗಲ್ಸ್ ರೌಂಡ್ ಆಫ್ 16 ಪಂದ್ಯದಲ್ಲಿ 15-21, 14-21 ಅಂತರದಿಂದ ಜಪಾನಿನ ಎರಡನೇ ಶ್ರೇಯಾಂಕದ ಕಾಂಟಾ ತ್ಸುನೇಯಾಮಾಗೆ ಶರಣಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications