ಮ್ಯಾಡ್ರೀಡ್ ಮಾಸ್ಟರ್ಸ್ 2023: ಫೈನಲ್‌ಗೆ ಲಗ್ಗೆಯಿಟ್ಟ ಭಾರತದ ಪಿವಿ ಸಿಂಧು
ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಮ್ಯಾಡ್ರೀಡ್ ಮಾಸ್ಟರ್ಸ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮೂಲಕ ಈ ವರ್ಷ ಬಿಡಬ್ಲ್ಯುಎಫ್ ಟೂರ್‌ನಲ್ಲಿ ಮೊದಲ ಬಾರಿಗೆ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶನಿವಾರನಡೆದ ಮ್ಯಾಡ್ರಿಡ್ ಮಾಸ್ಟರ್ಸ್ 2023 ರ ಸೆಮಿಫೈನಲ್‌ನಲ್ಲಿ ಸಿಂಧು ಸಿಂಗಾಪುರದ ಶ್ರೇಯಾಂಕರಹಿತ ಶಟ್ಲರ್ ಯೆಯೊ ಜಿಯಾ ಮಿನ್ ವಿರುದ್ಧ ಗೆದ್ದು ಈ ಸಾಧನೆ ಮಾಡಿದ್ದಾರೆ.
ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಎದುರಾಳಿ ಯೆಯೊ ಜಿಯಾ ಮಿನ್ ಅವರನ್ನು 24-22, 22-20 ನೇರ ಗೇಮ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಫೈನಲ್‌ನಲ್ಲಿ ಸಿಂಧು ಕರೋಲಿನಾ ಮರಿನ್ ಅಥವಾ ಇಂಡೋನೇಷ್ಯಾದ ಗ್ರೆಗೋರಿಯಾ ಮಾರಿಯಾ ತುಂಜಂಗ್ ಅವರನ್ನು ಎದುರಿಸಲಿದ್ದಾರೆ.

ಜಿಯಾ ಮಿನ್ ವಿರುದ್ಧ ನೇರ ಗೇಮ್‌ಗಳ ಗೆಲುವಿಗೆ ಸಿಂಧು 48 ನಿಮಿಷಗಳನ್ನು ತೆಗೆದುಕೊಂಡರು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ. 33ನೇ ಶ್ರೇಯಾಂಕದ ಎದುರಾಳಿ ಮೊದಲ ಗೇಮ್‌ನಲ್ಲಿ ಒಂದು ಹಂತದಲ್ಲಿ 20-15ರಲ್ಲಿ ಮುಂದಿದ್ದರು. ಆದರೆ ಸಿಂಧು ಬಳಿಕ ಅದ್ಭುತ ಕಮ್‌ಬ್ಯಾಕ್ ಮಾಡಿದರು. ಈ ಮೂಲಕ 24-22 ಅಂತರದಿಂದ ಆರಂಭಿಕ ಗೇಮ್ ಗೆದ್ದುಕೊಂಡರು. ಎರಡನೇ ಗೇಮ್‌ಗೆ ಕೂಡ ಇಷ್ಟೇ ಪೈಪೋಟಿ ಏರ್ಪಟ್ಟಿತ್ತು. ಇದರಲ್ಲಿ ಸಿಂಧು 22-20 ಅಂತರದಿಂದ ಗೆಲುವು ಸಾಧಿಸಿದರು.
ಇನ್ನು ಫೈನಲ್‌ನಲ್ಲಿ ಕರೊಲಿನಾ ಮರಿನ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಮರಿನ್ ಅವರೇ ಎದುರಾಳಿಯಾಗಿದ್ದರೆ ಈ ವರ್ಷದ ಎರಡನೇ ಮುಖಾಮುಖಿಯಾದಂತಾಗಲಿದೆ. ಮಲೇಷ್ಯಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಈ ಇಬ್ಬರು ಆಟಗಾರ್ತಿಯರು ಈ ವರ್ಷ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಇದರಲ್ಲಿ ಸಿಂಧು ನೇರ ಗೇಮ್‌ಗಳಲ್ಲಿ ಸೋಲು ಕಂಡಿದ್ದರು.
ಇನ್ನು ಮ್ಯಾಡ್ರೀಡ್ ಮಾಸ್ಟರ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಸಿಂಧು ಸೆಮಿಫೈನಲ್‌ನಲ್ಲಿ ಸಿಂಗಾಪುರದ ಯೆಯೊ ಜಿಯಾ ಮಿನ್ ಅವರ ಸವಾಲನ್ನು ಸ್ವೀಕರಿಸಿದ್ದು ಗೆದ್ದು ಬೀಗಿದ್ದಾರೆ. ಇದೀಗ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿದ್ದಾರೆ ಭಾರತದ ಸ್ಟಾರ್ ಆಟಗಾರ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications