ಮಲೇಷ್ಯಾ ಓಪನ್: ಆಯಾ ಒಹೊರಿ ಸೋಲಿಸಿ ಪಿ.ವಿ. ಸಿಂಧು ಮುನ್ನಡೆ

ಕೌಲಾಲಂಪುರ್, ಜೂ. 27: ಮಲೇಷ್ಯಾ ಓಪನ್ ವರ್ಲ್ಡ್ ಟೂರ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಬುಧವಾರದ ವನಿತಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಪಿವಿ ಸಿಂಧು, ಜಪಾನ್ ನ ಆಯಾ ಒಹೊರಿ ವಿರುದ್ಧ ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಜಯಿಸಿದ ಬಳಿಕ ಸಂಪೂರ್ಣ ಫಿಟ್ನೆಸ್ ಗೆ ಮರಳುವ ಸಲುವಾಗಿ ಉಬರ್ ಕಪ್ ನಿಂದ ಸಿಂಧು ಹೊರಗುಳಿದಿದ್ದರು. ಅದಾಗಿ ಮತ್ತೆ ಸ್ಪರ್ಧೆಗಿಳಿದಿದ್ದ ಸಿಂಧು ವಿಶ್ವ ನಂ. 14ರ ಒಹೊರಿ ಅವರನ್ನು 26-24, 21-15ರಿಂದ ಮಣಿಸಿದರು.
ವಿಶ್ವ ರ್ಯಾಂಕಿಂಗ್ ನ 3ನೇ ಶ್ರೇಯಾಂಕಿತೆಯಾಗಿರುವ ಸಿಂಧು ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಯಿಂಗ್ ಯಿಂಗ್ ಲೀ ಮತ್ತು ಚೈನೀಸ್ ತೈಪೆಯ ಚಿಯಾಂಗ್ ಯಿಂಗ್ ಲೀ ಅವರ ಕಾದಾಟದಲ್ಲಿ ಗೆದ್ದವರೊಟ್ಟಿಗೆ ಸವಾಲು ಸ್ವೀಕರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲಿ ಸಿಂಗಾಪುರ್ ಓಪನ್ ಚಾಂಪಿಯನ್ ಬಿ ಸಾಯಿ ಪ್ರಣೀತ್ ಅವರು ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಚೈನೀಸ್ ತೈಪೆಯ ವಾಂಗ್ ಟ್ಸು ವಿ ಅವರೆದುರು 12-21, 7-21ರ ಸೋಲನುಭವಿಸಿ ಪಂದ್ಯದಿಂದ ಹೊರ ನಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications