Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಡ್ಮಿಂಟನ್ ಚಾಂಪಿಯನ್ ಸಿಂಧುಗೆ BMW ಕಾರು ಗಿಫ್ಟ್ ಕೊಟ್ಟ ನಾಗಾರ್ಜುನ

Nagarjuna Gifted BMW Car to Badminton Star PV Sindhu

ಹೈದರಾಬಾದ್, ಸೆ. 15: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್, ಮುತ್ತಿನ ನಗರಿಯ ಕುವರಿ ಪಿ.ವಿ. ಸಿಂಧು ಅವರತ್ತ ಉಡುಗೊರೆಗಳ ಮಹಾಪೂರ ಹರಿದು ಬರುತ್ತಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸನ್ಮಾನ ಮಾಡಿ ಬಾಡ್ಮಿಂಟನ್ ಅಕಾಡೆಮಿ ಸ್ಥಾಪನೆಗೆ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಇದಾದ ಬಳಿಕ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಚಾಮುಂಡೇಶ್ವರಿನಾಥ್ ಹಾಗೂ ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಉಪಾಧ್ಯಕ್ಷ, ನಟ ನಾಗಾರ್ಜುನ ಅವರು ಸಿಂಧುಗೆ ಐಷಾರಾಮಿ ಬಿಎಂಡಬ್ಲೂ ಎಕ್ಸ್5 ಕಾರನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ.

ಹೈದ್ರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಿಂಧುಗೆ ಕಾರನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೋಚ್ ಪಿ ಗೋಪಿಚಂದ್ ಕೂಡಾ ಇದ್ದರು.

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾಗ ಇದೇ ಮಾಡೆಲ್ ಬಿಎಂಡಬ್ಲ್ಯೂ ಕಾರನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಿಂಧುಗೆ ಗಿಫ್ಟ್ ಆಗಿ ನೀಡಿದ್ದರು.

ಸಿಂಧುರನ್ನು ಸನ್ಮಾನಿಸಿ ಮಾತನಾಡಿದ ನಾಗಾರ್ಜುನ, "ಸಿಂಧು ಸಾಧನೆ ಅನನ್ಯವಾಗಿದೆ. ಇಂಥ ಇನ್ನೂ ಹಲವಾರು ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುವಂತಾಗಲಿ. ಸಿಂಧು ಅವರ ಈ ಸಾಧನೆಯ ಹಿಂದೆ ಶ್ರಮಿಸಿರುವ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ" ಎಂದರು.

ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಭಾನುವಾರ (ಆಗಸ್ಟ್ 25) ನಡೆದ ಬಿಡಬ್ಲ್ಯೂಎಫ್‌ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸಿಂಧು, ಮಾಜಿ ಚಾಂಪಿಯನ್, ಜಪಾನ್‌ನ ನೊಝೋಮಿ ಒಕುಹರ ಅವರನ್ನು 21-7, 21-7ರ ನೇರ ಸೆಟ್‌ನಿಂದ ಸೋಲಿಸಿ ಚಿನ್ನ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು

Story first published: Sunday, September 15, 2019, 11:20 [IST]
Other articles published on Sep 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+