ನ್ಯೂಜಿಲೆಂಡ್ ಓಪನ್: ಕ್ವಾರ್ಟರ್‌ಫೈನಲ್‌ಗೆ ಪ್ರಣೋಯ್, ಪ್ರಣೀತ್ ಔಟ್

ಆಕ್ಲೆಂಡ್, ಮೇ 02: ಭಾರತದ ಅನುಭವಿ ಆಟಗಾರ ಬಿ ಸಾಯ್ ಪ್ರಣೀತ್, ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನ ಸ್ಪರ್ಧೆಯಲ್ಲಿ ಸೋತು ಹೊರಬಿದ್ದರೆ, ಮಾಜಿ ರಾಷ್ಟ್ರೀಯ ಚಾಂಪಿಯನ್ ಎಚ್.ಎಸ್ ಪ್ರಣೋಯ್ ಮೂರನೇ ಸುತ್ತಿಗೆ ಮುನ್ನಡೆದಿದ್ದಾರೆ.
26 ವರ್ಷದ ಅನುಭವಿ ಆಟಗಾರ ಪ್ರಣೀತ್, ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಬ್ಯಾಡ್ಮಿಂಟನ್ ದಿಗ್ಗಜ ಲಿನ್ ಡ್ಯಾನ್ ಎದುರು 12-21, 12-21 ಅಂತರದ ನೇರ ಗೇಮ್‌ಗಳ ಅಂತರದಲ್ಲಿ ಸೋಲಿಗೆ ಶರಣಾದರು. ಟೂರ್ನಿಯಲ್ಲಿ 7ನೇ ಶ್ರೇಯಾಂಕ ಪಡೆದಿರುವ 35 ವರ್ಷದ ಲಿನ್ ಡ್ಯಾನ್, ಇದೀಗ ಕ್ವಾರ್ಟರ್ ಫೈನಲ್ಸ್‌ಗೆ ಕಾಲಿಟ್ಟಿದ್ದು ಅಗ್ರ ಶ್ರೇಯಾಂಕಿತ ಆಟಗಾರ ಆಂಥೊನಿ ಸಿನಿಸುಕಾ ಗಿನ್‌ಟಿಂಗ್ ಎದುರು ಸೆಣಸಲಿದ್ದಾರೆ.
ಇದೇ ವೇಳೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲೂ ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋತು ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ಸೈನಾ, ವಿಶ್ವದ 212ನೇ ಶ್ರೇಯಾಂಕದ ಆಟಗಾರ್ತಿ ಚೀನಾದ ವ್ಯಾಂಗ್ ಝಿಹಿ ವಿರುದ್ಧ 16-21, 23-21, 4-21 ಅಂತರದ ಗೇಮ್‌ಗಳ ಅಚ್ಚರಿಯ ಸೋಲನುಭವಿಸಿದರು.
ಸುಗಿಯಾರ್ಟೊಗೆ ಶಾಕ್ ನೀಡಿದ ಪ್ರಣೀತ್
ಗಾಯದ ಸಮಸ್ಯೆಗಳಿಂದ ಹೊರಬಂದಿರುವ ಅನುಭವಿ ಆಟಗಾರ ಎಚ್.ಎಸ್ ಪ್ರಣೋಯ್, ನ್ಯೂಜಿಲೆಂಡ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ಸ್ ತಲುಪಿದ್ದಾರೆ. ಟೂರ್ನಿಯಲ್ಲಿ ಶ್ರೇಯಾಂಕ ರಹಿತರಾಗಿ ಕಣಕ್ಕಿಳಿದಿರುವ ಪ್ರಣೋಯ್, ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕೇವಲ 37 ನಿಮಷಗಳಲ್ಲಿ 21-14 21-12ರ ಗೇಮ್‌ಗಳಿಂದ ಇಂಡೊನೇಷ್ಯಾದ ತಾರೆ ಟಾಮಿ ಸುಗಿಯಾರ್ಟೊಗೆ ಶಾಕ್ ನೀಡಿದರು. ಇದೀಗ ಸೆಮಿಫೈನಲ್ಸ್ ಹಂತಕ್ಕೇರಲು 5ನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಕೆಂಟಾ ಸುನೆಯಾಮ ಅವರ ಕಠಿಣ ಸವಾಲೆದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications