
ಹೈದರಾಬಾದ್, ಜನವರಿ 30: ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರನ್ನು ನಾರ್ತ್ ಈಸ್ಟರ್ನ್ ವಾರಿಯರ್ಸ್ ತಂಡದ ಆಟಗಾರ್ತಿ ಮಿಚೆಲ್ ಲಿ ದಂಗುಬಡಿಸಿದ್ದಾರೆ. ಸಿಂಧುವನ್ನು ಲಿ ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಆದರೆ ಮಾಜಿ ಚಾಂಪಿಯನ್ ಹೈದರಾಬಾದ್ ಹಂಟರ್ಸ್, ತಂಡದ ಆಧಾರದಲ್ಲಿ ತವರಿನಲ್ಲಿ ಜಯದ ಆರಂಭ ಕಂಡಿದೆ.
ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು, ಮಿಚೆಲ್ ಲಿ ಎದುರು 8-15, 9-15 ಸೋಲನುಭವಿಸಿದ್ದಾರೆ. ವಿಶ್ವ ನಂ.10ನೇ ಆಟಗಾರ್ತಿ ಆರಂಭದಿಂದಲೂ ಮುನ್ನಡೆಯಲ್ಲಿದ್ದು ಭಾರತದ ಆಟಗಾರ್ತಿಯಿಂದ ಜಯ ಕಸಿದುಕೊಂಡರು.
ಆದರೆ ತಂಡದ ಆಧಾರದಲ್ಲಿ ಹೈದರಾಬಾದ್ ಹಂಟರ್ಸ್, ನಾರ್ತ್ ಈಸ್ಟರ್ನ್ ವಾರಿಯರ್ಸ್ ಅನ್ನು 2-1ರ ಅಂತರದಿಂದ ಸೋಲಿಸಿದೆ. ಡೇರೆನ್ ಲಿವ್ ಅವರು ಲೀ ಚೆಯುಕ್ ಯಿಯು ಎದುರು 15-9, 15-10ರ ಜಯ ದಾಖಲಿಸಿದರೆ, ಮತ್ತೊಂದು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಿಕ್ಕಿ ರೆಡ್ಡಿ ಮತ್ತು ವ್ಲಾಡಿಮಿರ್ ಇವನೊವ್ ಜೋಡಿ, ವಾರಿಯರ್ಸ್‌ನ ಕ್ರಿಷ್ಣ ಪ್ರಸಾದ್ ಗರಗ-ಕಿಮ್ ಹಾ ನಾ ಜೋಡಿಯೆದುರು 15-12, 8-15, 15-12ರ ಗೆಲುವು ಕಂಡಿದೆ.