For Quick Alerts
ALLOW NOTIFICATIONS  
For Daily Alerts
 

Babar Azam: ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್‌ರನ್ನು ಹಿಂದಿಕ್ಕಿದ ಪಾಕ್ ನಾಯಕ ಬಾಬರ್ ಅಜಂ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು ಭಾರತದ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಮೀರಿಸಿ ಮೊದಲ ಸ್ಥಾನ ಆಕ್ರಮಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ತಮ್ಮ ಕೊನೆಯ ಕನಿಷ್ಠ 15 ಇನ್ನಿಂಗ್ಸ್‌ಗಳನ್ನು ಆಡಿದ ನಂತರ ಗರಿಷ್ಠ ಬ್ಯಾಟಿಂಗ್ ಸರಾಸರಿಯೊಂದಿಗೆ ಬಾಬರ್ ಅಜಂ ಅವರು ವಿಶ್ವದ ಪ್ರಮುಖ ಆಟಗಾರರನ್ನು ಹಿಂದಿಕ್ಕಿದ್ದಾರೆ. ಬಾಬರ್ ಅಜಂ 20 ಇನ್ನಿಂಗ್ಸ್‌ಗಳನ್ನು ಆಡಿದ ನಂತರ 69.10 ಸರಾಸರಿ ಬ್ಯಾಟಿಂಗ್ ಮಾಡಿದ್ದಾರೆ. ಇದೇ ವೇಳೆ ಬಾಬರ್ ಅಜಂ ಅವರು ನಾಲ್ಕು ಶತಕ ಮತ್ತು 8 ಅರ್ಧಶತಕಗಳನ್ನು ಬಾರಿಸಿದ್ದಾರೆ.

Pakistan Captain Babar Azam Overtakes Virat Kohli And Steve Smith In Test Cricket

ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಹಾಲಿ ಬ್ಯಾಟರ್ ಸ್ಟೀವ್ ಸ್ಮಿತ್ ಅವರು 30 ಇನ್ನಿಂಗ್ಸ್‌ಗಳಲ್ಲಿ 55.40 ಸರಾಸರಿ ಬ್ಯಾಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯೊಂದಿಗೆ ನಾಲ್ಕು ಶತಕ ಮತ್ತು 6 ಅರ್ಧಶತಕಗಳನ್ನು ಗಳಿಸಿದ್ದಾರೆ.

ಇನ್ನು ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಅವರು 34 ಇನ್ನಿಂಗ್ಸ್‌ಗಳನ್ನು ಆಡಿದ ನಂತರ 54.20 ಸರಾಸರಿಯೊಂದಿಗೆ ಸ್ಟೀವ್ ಸ್ಮಿತ್‌ ಅವರಿಗಿಂತ ಹಿಂದಿದ್ದಾರೆ. ಜೋ ರೂಟ್ ಅವರು 6 ಶತಕ ಮತ್ತು 6 ಅರ್ಧಶತಕಗಳೊಂದಿಗೆ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

Pakistan Captain Babar Azam Overtakes Virat Kohli And Steve Smith In Test Cricket

ಇನ್ನು ಶ್ರೀಲಂಕಾದ ಅನುಭವಿ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಅವರು ನಾಲ್ಕನೇ ಸ್ಥಾನವನ್ನು ಹೊಂದಿದ್ದು, 16 ಇನ್ನಿಂಗ್ಸ್‌ಗಳಲ್ಲಿ 48.40 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ತನ್ನ ಕೊನೆಯ 16 ಇನ್ನಿಂಗ್ಸ್‌ಗಳಲ್ಲಿ ಏಂಜೆಲೊ ಮ್ಯಾಥ್ಯೂಸ್ ಅವರು ಬ್ಯಾಟ್‌ನಿಂದ ಎರಡು ಶತಕ ಹಾಗೂ ಎರಡು ಅರ್ಧಶತಕ ಬಂದಿವೆ.

ಐದನೇ ಸ್ಥಾನದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇದ್ದಾರೆ. ತನ್ನ ಕೊನೆಯ 27 ಇನ್ನಿಂಗ್ಸ್‌ಗಳಲ್ಲಿ 34.65ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ ಅವರೆ ಬ್ಯಾಟ್‌ನಿಂದ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಬಂದಿವೆ. ಗಮನಾರ್ಹವಾಗಿ, 2020ರಿಂದ 2022ರ ಅಂತ್ಯದವರೆಗೆ ಕಳಪೆ ಬ್ಯಾಟಿಂಗ್ ಫಾರ್ಮ್‌ನೊಂದಿಗೆ ಸಾಗಿದ್ದರು.

ಕಳೆದ ತಿಂಗಳು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತನ್ನ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಿದ್ದರು. ಪಾಕಿಸ್ತಾನ ತಂಡದ ನಾಯಕನಾಗಿ 2023ರ ವಿಶ್ವಕಪ್ ಎತ್ತುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದರು.

"2023ರ ವಿಶ್ವಕಪ್ ವಿಜೇತ ತಂಡದ ನಾಯಕನಾಗುವುದು ಅತ್ಯುತ್ತಮವಾಗಿರುತ್ತದೆ" ಎಂದು ಬಾಬರ್ ಅಜಂ ಹೇಳಿದ್ದಾರೆ ಎಂದು ಐಸಿಸಿ ಉಲ್ಲೇಖಿಸಿದೆ. ವಿಶ್ವಕಪ್‌ ದೃಷ್ಟಿಯಲ್ಲಿಟ್ಟುಕೊಂಡು ಬಾಬರ್ ಅಜಂ ಅವರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕೊಲಂಬೊ ಸ್ಟ್ರೈಕರ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೊಲಂಬೊ ಸ್ಟ್ರೈಕರ್ಸ್‌ನ ಪತ್ರಿಕಾ ಪ್ರಕಟಣೆಯ ಪ್ರಕಾರ, ಕೊಲಂಬೊ ಸ್ಟ್ರೈಕರ್ಸ್ ತಂಡ ಈಗಾಗಲೇ ಎಲ್‌ಪಿಎಲ್ 2023 ಪಂದ್ಯಾವಳಿಗಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್, ಪಾಕ್ ವೇಗಿ ನಸೀಮ್ ಶಾ ಮತ್ತು ಶ್ರೀಲಂಕಾದ ಟಿ20 ಸ್ಟಾರ್ ಬೌಲರ್‌ಗಳಾದ ಮಥೀಶ ಪತಿರಣ ಮತ್ತು ಚಾಮಿಕಾ ಕರುಣಾರತ್ನ ಅವರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿದೆ.

"ಯಾವುದೇ ಫ್ರಾಂಚೈಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹರಾಜು ಪ್ರಕ್ರಿಯೆ ಅತ್ಯಂತ ಪ್ರಮುಖ ಅಂಶವಾಗಿದೆ. ನಮಗೆ ಅಗತ್ಯವಿರುವ ಆಟಗಾರರ ಬಗ್ಗೆ ನಾವು ಮಾತನಾಡಿದ್ದೇವೆ ಮತ್ತು ಪಂದ್ಯಾವಳಿಯಲ್ಲಿ ನಾವು ಖಂಡಿತವಾಗಿಯೂ ಬಲಿಷ್ಠ ತಂಡವನ್ನು ರೂಪಿಸಲು ಪ್ರಯತ್ನಿಸುತ್ತೇವೆ," ಎಂದು ಕೊಲಂಬೊ ಸ್ಟ್ರೈಕರ್ಸ್ ಪತ್ರಿಕಾ ಪ್ರಕಟಣೆಯಲ್ಲಿ ಬಾಬರ್ ಅಜಂ ತಿಳಿಸಿದ್ದಾರೆ.

Story first published: Wednesday, June 14, 2023, 9:22 [IST]
Other articles published on Jun 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+