Paris Olympics 2024: ಭಾರತಕ್ಕೆ ಮತ್ತೊಂದು ಅಘಾತ; ಸೆಮಿಸ್‌ನಲ್ಲಿ ಲಕ್ಷ್ಯಸೇನ್‌ಗೆ ವೀರೋಚಿತ ಸೋಲು!
ಆಗಸ್ಟ್ 4 ಭಾನುವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಫೈನಲ್‌ನಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ವೀರೋಚಿತ ಸೋಲು ಅನುಭವಿಸಿದ್ದಾರೆ.
ಹಾಲಿ ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಲಕ್ಷ್ಯಸೇನ್ 22-20, 21-14 ನೇರ ಸೆಟ್‌ಗಳಿಂದ ಸೋತಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅದ್ಧೂರಿಯಾಗಿ ಅಭಿಯಾನ ಆರಂಭಿಸಿದ್ದ ಲಕ್ಷ್ಯ ಸೇನ್ ಅವರಿಂದ ಭಾರತ ಪದಕದ ನಿರೀಕ್ಷೆಯಲ್ಲಿತ್ತು.

ಪ್ಯಾರಿಸ್‌ನಲ್ಲಿ ಲಕ್ಷ್ಯ ಇನ್ನೂ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಸೋಮವಾರ ಕಂಚಿನ ಪದಕಕ್ಕಾಗಿ ಸೇನ್ ಸ್ಪರ್ಧಿಸಲಿದ್ದಾರೆ.
ಸೆಮಿಫೈನಲ್ ಪಂದ್ಯವನ್ನು ಅಬ್ಬರದಂದ ಆರಂಭಿಸಿದ ಸೇನ್ ಅದ್ಭುತ ಶಾಟ್‌ಗಳ ಮೂಲಕ ಗಮನ ಸೆಳೆದರು. ಮಧ್ಯ ವಿರಾಮದ ವೇಳೆಗೆ 11-9 ಅಂಕಗಳೊಂದಿಗೆ 2 ಅಂಕಗಳ ಮುನ್ನಡೆ ಪಡೆದರು.
ಇದಾದ ಬಳಿಕವೂ ಅಮೋಘ ಪ್ರದರ್ಶನ ನೀಡಿದ ಲಕ್ಷ್ಯ ಎದುರಾಳಿ ಆಟಗಾರನಿಗೆ ಯಾವುದೇ ಅವಕಾಶ ನೀಡಲಿಲ್ಲ. ಮೊದಲ ಸೆಟ್‌ನ ಒಂದು ಹಂತದಲ್ಲಿ ಲಕ್ಷ್ಯ 18-15ರಲ್ಲಿ ಮುನ್ನಡೆ ಸಾಧಿಸಿದ್ದರು.
ಆದರೆ ವಿಕ್ಟರ್ ಬಲವಾದ ಪುನರಾಗಮನವನ್ನು ಮಾಡಿ ಸ್ಕೋರ್ ಅನ್ನು 20-20 ರಲ್ಲಿ ಸಮಗೊಳಿಸಿದರು ನಂತರ ಸತತ ಎರಡು ಗೇಮ್ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಮೊದಲ ಸೆಟ್ ಅನ್ನು 22-20 ರಿಂದ ಗೆದ್ದರು.
ಉಭಯ ಆಟಗಾರರ ನಡುವಿನ ಎರಡನೇ ಸೆಟ್ ಕೂಡ ರೋಚಕವಾಗಿತ್ತು. ಎರಡನೇ ಗೇಮ್‌ನಲ್ಲಿ, 7-0 ಅಂತರದಲ್ಲಿ ಹಿನ್ನಡೆಯಾದ ನಂತರ ಅಕ್ಸೆಲ್‌ಸನ್ ಅದ್ಭುತ ಪುನರಾಗಮನ ಮಾಡಿದರು.
ಆದರೆ, ಮಧ್ಯ ವಿರಾಮದವರೆಗೂ ಲಕ್ಷ್ಯ ಸೇನ್ 11-10 ರಿಂದ ಮುನ್ನಡೆ ಸಾಧಿಸಿದರು. ಮತ್ತೊಮ್ಮೆ ಸೇನ್ ತಮ್ಮ ಮುನ್ನಡೆಯನ್ನು ಕಳೆದುಕೊಂಡರು. ಹೀಗಾಗಿ ಎರಡನೇ ಸೆಟ್ ಅನ್ನು ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 14-21 ರಿಂದ ಸೋತು ಸೆಮಿಫೈನಲ್‌ನಿಂದ ಹೊರಬಿದ್ದರು.
ಚೊಚ್ಚಲ ಒಲಿಂಪಿಕ್ಸ್ ಆಡುತ್ತಿರುವ ಭಾರತದ ಯುವ ಷಟ್ಲರ್ ಲಕ್ಷ್ಯ ಸೇನ್ ಅವರು ಸೋಮವಾರ ಕಂಚಿನ ಪದಕಕ್ಕಾಗಿ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಎದುರಿಸಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಸೋಮವಾರ ಸಂಜೆ 6 ಗಂಟೆಗೆ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications