
ಬೆಂಗಳೂರು, ಜನವರಿ 13: ಪ್ರೀಮಿಯರ್ ಬಾಡ್ಮಿಂಟನ್ ಲೀಗ್ (ಪಿಬಿಎಲ್ ) ಸೀಸನ್ 4ರ ಚಾಂಪಿಯನ್ ಆಗಿ ಬೆಂಗಳೂರು Raptors ತಂಡ ಹೊರಹೊಮಿದೆ. ಟೂರ್ನಿಯುದ್ದಕ್ಕೂ ಅಜೇಯರಾಗಿ ಉಳಿದ ಬೆಂಗಳೂರು ತಂಡದ ನಾಯಕ ಕಿಡಾಂಬಿ ಶ್ರೀಕಾಂತ್ ಅವರ ಸಾರಥ್ಯದಲ್ಲಿ ಇಂದು(ಜನವರಿ 13) ನಡೆದ ಅಂತಿಮ ಹಣಾಹಣಿಯಲ್ಲಿ ಬೆಂಗಳುರು ತಂಡವು ಮುಂಬೈ ರಾಕೆಟ್ಸ್ ತಂಡವನ್ನು 4-3ರ ಅಂತರದಲ್ಲಿ ಸೋಲಿಸಿದೆ.
ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಮುಂಬೈ ಹಾಗೂ ಬೆಂಗಳೂರು ತಂಡದ ಆಟಗಾರರು ಸಕತ್ ಮನರಂಜನೆ ನೀಡಿದರು.
22ದಿನಗಳ ಕಾಲ 29 ಪಂದ್ಯಗಳು, 9 ತಂಡಗಳು ಪಿಬಿಎಲ್ ಸೀಸನ್ 4ರ ಪಟ್ಟಕ್ಕಾಗಿ ಸೆಣಸಾಟ ನಡೆಸಿದ್ದವು. ಕಳೆದ ವರ್ಷ ಫೈನಲ್ ನಲ್ಲಿ ಹೈದರಾಬಾದ್ ವಿರುದ್ಧ ಸೋಲು ಕಂಡಿದ್ದ ಬೆಂಗಳೂರು ಈ ಬಾರಿ ಚಾಂಪಿಯನ್ ಆಗಿದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅವಧ್ ವಾರಿಯರ್ಸ್ ತಂಡವನ್ನು ಬೆಂಗಳೂರು ತಂಡ ಸೋಲಿಸಿತ್ತು. ಹೈದರಾಬಾದ್ ಹಂಟರ್ಸ್ ಸೋಲಿಸಿ, ಮುಂಬೈ ರಾಕೆಟ್ಸ್ ಫೈನಲ್ ತಲುಪಿತ್ತು.
ಫಲಿತಾಂಶ : ಬೆಂಗಳೂರು 4- ಮುಂಬೈ 3
* ಪುರುಷರ ಡಬಲ್ಸ್ : ಬೆಂಗಳೂರಿನ ಮೊಹಮ್ಮದ್ ಅಹ್ಸಾನ್ ಹಾಗೂ ಹೆಂಡ್ರಾ ಸೆಟಿಯಾವನ್ ಗೆ 15-13, 15-10ರಲ್ಲಿ ಕಿಮ್ ಹಾಗೂ ಲೀ ವಿರುದ್ಧ ಗೆಲುವು.
* ಪುರುಷರ ಸಿಂಗಲ್ಸ್ 1 : ಕಿಡಾಂಬಿ ಶ್ರೀಕಾಂತ್ 15-7, 15-10ರಲ್ಲಿ ಡೆನ್ಮಾರ್ಕಿನ ಆಂಡೆರೆಸ್ ಅಂಟೊನ್ಸೆನ್ ವಿರುದ್ಧ ಗೆಲುವು
* ಪುರುಷರ ಸಿಂಗಲ್ಸ್ 2: ಮುಂಬೈನ ಸಮೀರ್ ವರ್ಮಾಗೆ 15-7, 15-12, 15-3ರಲ್ಲಿ ಬೆಂಗಳೂರಿನ ಸಾಯಿ ಪ್ರಣೀತ್ ವಿರುದ್ಧ ಗೆಲುವು.