ಡೆಲ್ಲಿ ಡ್ಯಾಶರ್ಸ್ ಸೋಲಿಸಿ ಮುನ್ನಡೆ ಗಿಟ್ಟಿಸಿದ ಹೈದರಾಬಾದ್ ಹಂಟರ್ಸ್

ಬೆಂಗಳೂರು, ಜನವರಿ 10: ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಡ್ಯಾಶರ್ಸ್ ವಿರುದ್ಧ ಹೈದರಾಬಾದ್ ಹಂಟರ್ಸ್ 4-3ರ ಗೆಲುವನ್ನಾಚರಿಸಿದೆ.
ಈ ಪಂದ್ಯದ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಹೈದರಾಬಾದ್ ಹಂಟರ್ಸ್ ತಂಡ ಒಟ್ಟು 24 ಪಾಯಿಂಟ್ಸ್‌ಗಳೊಂದಿಗೆ ಪಿವಿಎಲ್ 4ನೇ ಸೀಸನ್‌ನ ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಮೊದಲ ಸ್ಥಾನದಲ್ಲಿ 25 ಅಂಕಗಳಿಸಿರುವ ಅವಧೆ ವಾರಿಯರ್ಸ್ ಇದೆ.
ವಿಶ್ವ ನಂ. 3 ಆಟಗಾರ್ತಿ ಸಿಂಧು ಎದುರು ವಿಶ್ವ ನಂ.32ನೇ ರಷ್ಯಾ ಆಟಗಾರ್ತಿ ಎವೆಜಿನಿಯ ಕೊಸೆಟ್ಸ್ಕಾಯ ಸುಲಭಬಾಗಿ ತಲೆಬಾಗಿದರು. ಸಿಂಧು ಪಂದ್ಯವನ್ನು 15-11, 15-9ರ ನೇರ ಸೆಟ್‌ನಿಂದ ಜಯಿಸಿದರು. ಇದರೊಂದಿಗೆ ಹೈದರಾಬಾದ್ ಒಂದರಲ್ಲಿ ಸೋತು ಐದು ಪಂದ್ಯಗಳನ್ನು ಗೆದ್ದಂತಾಗಿದೆ.
Story first published: Thursday, January 10, 2019, 20:47 [IST]
Other articles published on Jan 10, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications