For Quick Alerts
ALLOW NOTIFICATIONS  
For Daily Alerts

ಪಿಬಿಎಲ್ ಸೀಸನ್ 04 ಫೈನಲ್ ತಲುಪಿದ ಬೆಂಗಳೂರು ತಂಡ

PBL 2018: Srikanth, Praneeth shine as Bengaluru Raptors beat Awadhe Warriors to enter final

ಬೆಂಗಳೂರು, ಜನವರಿ 11: ಇಲ್ಲಿನ ಶ್ರೀಕಂಠೀವರ ಕ್ರೀಡಾಂಗಣದಲ್ಲಿ ನಡೆದ 4ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ನ ಉಪಾಂತ್ಯ ಪಂದ್ಯದಲ್ಲಿ ಕೆ ಶ್ರೀಕಾಂತ್ ಸಾರಥ್ಯದ ಬೆಂಗಳೂರು Raptors ತಂಡವು ಅವಧ್ ವಾರಿಯರ್ಸ್ ತಂಡವನ್ನು 4-2 ಅಂತರದಿಂದ ಸೋಲಿಸಿ, ಫೈನಲ್ ತಲುಪಿದೆ. ಇದಕ್ಕೂ ಮುನ್ನ ಬೆಂಗಳೂರು ತಂಡವು 3-0 ಯಿಂದ ಮಾಜಿ ಚಾಂಪಿಯನ್ ಚೆನ್ನೈ ಸ್ಮ್ಯಾಷರ್ಸ್ ತಂಡವನ್ನು ಮಣಿಸಿ, ಸೆಮಿಫೈನಲ್ ತಲುಪಿತ್ತು.

ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಹೆನೆಂದ್ರಾ ಸೆಟಿಯಾವನ್-ಮೊಹಮದ್ ಅಶನ್ ಜೋಡಿಯು 15-14, 9-15, 11-15 ರಿಂದ ಅವಧ್ ವಾರಿಯರ್ಸ್ ನ ಮಥಾಯಿಸ್ ಕ್ರಿಶ್ಚಿಯನ್ಸೆನ್ / ಯಂಗ್ ಲೀ ಅವರನ್ನು ಸೋಲಿಸಿ ಬೆಂಗಳೂರು ತಂಡಕ್ಕೆ ಫೈನಲ್ ಹಾದಿ ಸುಗಮಗೊಳಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಕಾದಾಟದಲ್ಲಿ ಬೆಂಗಳೂರು ತಂಡದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಅವಧ್ ವಾರಿಯರ್ಸ್ ನ ಆಟಗಾರ ವಿಶ್ವದ ನಂ .1 ಸೊನ್ ವಾನ್ ಹೋ ಅವರನ್ನು 15-7, 15-10ರಲ್ಲಿ ಸೋಲಿಸಿದರು. ಸಾಯಿ ಪ್ರಣೀತ್ ಅವರು ಲೀ ಡೊಂಗ್ ಕಿಯನ್ ಅವರನ್ನು 15-9, 15-4ರಲ್ಲಿ ಸೋಲಿಸಿದರು.

ಸಾಯಿಪ್ರಣೀತ್, ಟ್ರಂಪ್ ಘೋಷಣೆಯೊಂದಿಗೆ ಕಣಕ್ಕಿಳಿದ ಅನುಭವಿ ಆಟಗಾರ ಚೆನ್ನೈ ತಂಡದ ಪಿ.ಕಶ್ಯಪ್ ಅವರನ್ನು 15-11, 15-12 ನೇರ ಗೇಮ್ಳಿಂದ ಮಣಿಸಿದರು.

Story first published: Saturday, January 12, 2019, 0:10 [IST]
Other articles published on Jan 12, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+