Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಬಿಎಲ್: ಸಾಯ್‌ ಪ್ರಣೀತ್-ಶ್ರೀಕಾಂತ್ ಮಿಂಚು, ಬೆಂಗಳೂರಿಗೆ ಜಯ

PBL 2018: Srikanth, Sai Praneeth shine as Bengaluru beat Delhi

ಅಹ್ಮದಾಬಾದ್, ಜನವರಿ 3: ಅಹ್ಮದಾಬಾದ್‌ನ ಟ್ರಾನ್ಸ್‌ ಸ್ಟೇಡಿಯಾ ಅರೆನಾದಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಪಂದ್ಯದಲ್ಲಿ ನಾಯಕ ಕಿದಂಬಿ ಶ್ರೀಕಾಂತ್ ಮತ್ತು ಬಿ ಸಾಯ್ ಪ್ರಣೀತ್ ಮುನ್ನಡೆಯ ಕಾರಣ ಹಿಂದೊಮ್ಮೆ ಚಾಂಪಿಯನ್ ಅನ್ನಿಸಿದ್ದ ಡೆಲ್ಲಿ ಡ್ಯಾಷರ್ಸ್ ವಿರುದ್ಧ ಬೆಂಗಳೂರು ರ್ಯಾಪ್ಟರ್ಸ್ ಗೆಲುವನ್ನಾಚರಿಸಿದೆ.

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬೆಂಗಳೂರು ಪ್ರತಿನಿಧಿಸಿದ್ದ ಸಾಯ್ ಪ್ರಣೀತ್ ತನ್ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿನ ಟ್ರೇನಿಂಗ್‌ ಪಾರ್ಟ್ನರ್ ಎಚ್‌ಎಸ್‌ ಪ್ರಣಯ್ ಅವರನ್ನು 15-12, 14-15, 15-13ರ ಅಂತರದಿಂದ ಕೆಡವಿದರು. ಮೊಣಕಾಲು ಗಾಯದಿಂದ ಬಳಲುತ್ತಿದ್ದ ಪ್ರಣಯ್, ಪ್ರಣೀತ್‌ಗೆ ಶರಣಾದರು.

ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ರ್ಯಾಪ್ಟರ್ಸ್ ತಂಡದ ನಾಯಕ ಕಿದಂಬಿ ಶ್ರೀಕಾಂತ್, ಡೆಲ್ಲಿ ಡ್ಯಾಷರ್ಸ್‌ನ ಟಾಮಿ ಸುಗಿರ್ಟೊ ಎದುರು ಕಾದಾಡಿದರು. ಇದರಲ್ಲಿ ಭಾರತದ ಸ್ಟಾರ್ ಆಟಗಾರ ಶ್ರೀಕಾಂತ್ ಅವರು ಇಂಡೋನೇಷ್ಯಾ ಆಟಗಾರ ಸುಗಿರ್ಟೊ ಅವರನ್ನು 15-6, 12-15, 15-10 ಅಂತರದಿಂದ ಸೋಲಿಸಿದರು.

Story first published: Thursday, January 3, 2019, 19:24 [IST]
Other articles published on Jan 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+