ಪ್ರಕಾಶ್ ಪಡುಕೋಣೆ ಸಂಸ್ಥೆಯಿಂದ ಕಾರ್ಪೊರೇಟ್ ಬ್ಯಾಂಡ್ಮಿಂಟನ್ ಚಾಂಪಿಯನ್‌ಶಿಪ್
ಬೆಂಗಳೂರು, ಜು. 1 : ಖ್ಯಾತ ಬ್ಯಾಂಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರ ಸಂಸ್ಥೆ ಪ್ರಕಾಶ್ ಪಡುಕೋಣೆ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ (ಪಿಪಿಎಸ್ಎಂ) ಜುಲೈ 26, 27 ಮತ್ತು ಆಗಸ್ಟ್ 3, 4ರಂದು ಕಾರ್ಪೊರೇಟ್ ಬ್ಯಾಂಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿ ಆಯೋಜಿಸಿದೆ.
ಮಿಲ್ಲರ್ಸ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ ಈ ಪಂದ್ಯಾವಳಿಗಳು ವಾರಾಂತ್ಯದಲ್ಲಿ ನಡೆಯಲಿವೆ ಎಂದು ಪಿಪಿಎಸ್ಎಂ ಪ್ರಕಟಿಸಿದೆ. ಈ ಪಂದ್ಯಾವಳಿಯಲ್ಲಿ ವೈಯಕ್ತಿಕವಾಗಿ ಅಥವಾ ತಂಡವಾಗಿ ಭಾಗವಹಿಸಬಹುದು. ಆಸಕ್ತರು ಜುಲೈ 21ರೊಳಗಾಗಿ ನೋಂದಾಯಿಸಿಕೊಳ್ಳಬೇಕು.
"ನಾವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ಟೂರ್ನಾಮೆಂಟನ್ನು ಆಯೋಜಿಸಿದ್ದೇವೆ. ಈ ಪಂದ್ಯಾವಳಿಯ ಮುಖಾಂತರ ಕಾರ್ಪೊರೇಟ್ ಮಟ್ಟದಲ್ಲಿಯೂ ಯಶಸ್ವಿಯಾಗಲಿದ್ದೇವೆ ಎಂಬ ವಿಶ್ವಾಸವಿದೆ. ಬ್ಯಾಂಡ್ಮಿಂಟನ್ ಮುಖಾಂತರ ಆರೋಗ್ಯ ಮತ್ತು ದೈಹಿಕ ಸ್ವಾಸ್ಥ್ಯ ಕಾಪಾಡುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಆಹ್ವಾನಿಸುತ್ತಿದ್ದೇವೆ" ಎಂದು ಆಯೋಜಕರು ತಮ್ಮ ವೆಬ್ ಸೈಟಿನಲ್ಲಿ ಕೋರಿದ್ದಾರೆ.

ಜುಲೈ 11ರ ಮೊದಲು ನೋಂದಾಯಿಸಿಕೊಂಡವರಿಗೆ ಯೋನೆಕ್ಸ್ ಗಿಫ್ಟ್ ಹ್ಯಾಂಪರ್ ವಿಶೇಷ ಉಡುಗೊರೆ ಕಾದಿರುತ್ತದೆ. ಹಾಗು, ಈ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ಒಂದು ತಿಂಗಳ ಕಾಲ ಪಿಪಿಎಸ್ಎಂನಲ್ಲಿ ಉಚಿತ ಬ್ಯಾಡ್ಮಿಂಟನ್ ತರಬೇತಿಯನ್ನು ಕೂಡ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.
ಜೊತೆಗೆ ಮೊದಲ ರೌಂಡಿನಲ್ಲಿಯೇ ಸೋತ ಪುರುಷರ ಸಿಂಗಲ್ಸ್, ಡಬಲ್ಸ್ ಮತ್ತು ಮಹಿಳೆಯರ ಡಬಲ್ಸ್ ಆಟವನ್ನು ಆಡಿಸಲಾಗುವುದು. ನೋಂದಾವಣಿಗಾಗಿ 9008501007 ಸಂಖ್ಯೆಗೆ ಕರೆ ಮಾಡಿರಿ ಅಥವಾ [email protected] ವಿಳಾಸಕ್ಕೆ ಈಮೇಲ್ ಮಾಡಿರಿ. ಇಲ್ಲಿ ಕ್ಲಿಕ್ಕಿಸಿ ಕೂಡ ನೋಂದಾವಣಿ ಮಾಡಿಕೊಳ್ಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications