ಇಂಡೋನೇಷ್ಯಾ ಓಪನ್: ಲಿನ್ ಡಾನ್ ಗೆ ದಂಗುಬಡಿಸಿದ ಪ್ರಣಯ್

ಜಕಾರ್ತಾ, ಜು. 3: ಇಂಡೋನೇಷ್ಯಾದ ಜಕಾರ್ತಾದಲ್ಲಿ ಮಂಗಳವಾರದ ನಡೆದ 'ಇಂಡೋನೇಷ್ಯಾ ಓಪನ್' ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಅನುಭವಿ ಆಟಗಾರ ಲಿನ್ ಡಾನ್ ಅವರನ್ನು ಹಿಮ್ಮೆಟ್ಟಿಸುವ ಮೂಲಕ ಭಾರತದ ಎಚ್ಎಸ್ ಪ್ರಣಯ್ ದಂಗುಬಡಿಸಿದರು.
ವಿಶ್ವದ 13ನೇ ಶ್ರೇಯಾಂಕಿತ ಆಟಗಾರರಾಗಿರುವ ಪ್ರಣಯ್ 8ನೇ ಶ್ರೇಯಾಂಕಿತ ಆಟಗಾರ ಲಿನ್ ಡಾನ್ ಅವರನ್ನು ಮೊದಲ ಸೆಟ್ ನಲ್ಲಿ 21-15ರಿಂದ ಸೋಲಿಸಿದರು. ದ್ವಿತೀಯ ಸೆಟ್ ನಲ್ಲಿ ತಿರುಗಿಬಿದ್ದ ಚೈನೀಸ್ ಆಟಗಾರ 21-9ರಿಂದ ಗೇಮ್ ತನ್ನದಾಗಿಸಿಕೊಂಡರು. ಆದರೆ ಅಂತಿಮ ಸೆಟ್ ನಲ್ಲಿ ಉತ್ತಮ ಆಟವಾಡಿದ ಪ್ರಣಯ್ 21-14ರಿಂದ ಪಂದ್ಯ ಗೆದ್ದುಕೊಂಡರು. 2015ರ ಫ್ರೆಂಚ್ ಓಪನ್ ನಲ್ಲೂ ಪ್ರಣಯ್ ಅವರು ಲಿನ್ ಡಾನ್ ಗೆ ಸೋಲಿಣಿಸಿದ್ದರು.
ಪುರುಷರ ಸಿಂಗಲ್ಸ್ ಮತ್ತೊಂದು ಪಂದ್ಯದಲ್ಲಿ ಇನ್ನೊಬ್ಬ ಭಾರತೀಯ ಆಟಗಾರ ಸಮೀರ್ ವರ್ಮಾ ಅವರು ಡೆನ್ಮಾರ್ಕ್ ನ ರಾಸ್ಮಸ್ ಜೆಮೆಕೆ ಅವರ ಎದುರು ಸೋತು ಪಂದ್ಯದಿಂದ ಹೊರಬಿದ್ದಿದ್ದಾರೆ. ಸಮೀರ್ ಅವರನ್ನು ಜೆಮೆಕೆ 21-9, 12-21, 22-20 ಅಂತರದಿಂದ ಮಣಿಸಿದರು. ಇಬ್ಬರ ಮಧ್ಯೆ ಸುಮಾರು 1 ಗಂಟೆಗಳ ಕಾಲ ಕಾದಾಟ ನಡೆಯಿತು.
ವನಿತಾ ಡಬಲ್ಸ್ ನಲ್ಲಿ ಭಾರತದ ಜಕ್ಕಂಪುಡಿ ಮೇಘನಾ ಮತ್ತು ಪೂರ್ವಿಶಾ ಎಸ್ ರಾಮ್ ಜೋಡಿ, ಇಂಡೋನೇಷ್ಯಾದ ಅಗಾಥಾ ಇಮ್ಯಾನ್ಯುಲಾ ಮತ್ತು ಸಿಟಿ ಫಡಿಯಾ ಸಿಲ್ವಾ ರಾಮಧಂತಿ ವಿರುದ್ಧ 11-21, 18-21ರ ಸೋಲಿನೊಂದಿಗೆ ಪಂದ್ಯದಿಂದ ಹೊರ ನಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications