For Quick Alerts
ALLOW NOTIFICATIONS  
For Daily Alerts

ಎರಡನೇ ಬಾರಿಗೆ ಪಿಬಿಎಲ್ ಚಾಂಪಿಯನ್ ಆದ ಬೆಂಗಳೂರು ರ‍್ಯಾಪ್ಟರ್ಸ್

Premier Badminton League: Bengaluru Raptors Keep Title With Top Show

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಗೆಲ್ಲುವ ಮೂಲಕ ಮತ್ತೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಪಿಬಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

ಐದನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ರ‍್ಯಾಪ್ಟರ್ಸ್ ಮತ್ತು ನಾರ್ತ್ ಈಸ್ಟರ್ನ್ ವಾರಿಯರ್ಸ್ ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಿತ್ತು. ಈ ಕಾದಾಟದಲ್ಲಿ ಬೆಂಗಳೂರು ತಂಡ ಗೆದ್ದು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೈದ್ರಾಬಾದ್‌ನ ಜಿಎಂಸಿ ಒಳಾಂಗಣ ಕ್ರೀಡಾಂಗಣ ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಿಕೊಂಡಿತ್ತು. ಈ ಪಂದ್ಯದಲ್ಲಿ ಬೆಂಗಳೂರು ತಂಡ ನಾರ್ತ್ ಈಸ್ಟರ್ನ್ ವಾರಿಯರ್ಸ್ ವಿರುದ್ಧ 4-2 ಅಂತರದಿಂದ ಗೆದ್ದು ಬೀಗಿದೆ.

ಮೊದಲಿಗೆ ಪುರುಷರ ಸಿಂಗಲ್ಸ್‌ನಲ್ಲಿ ಬೆಂಗಳೂರು ತಂಡದ ಬಿ.ಸಾಯಿ ಪ್ರಣೀತ್ ನಾರ್ಥ್ ಈಸ್ಟರ್ನ್ ತಂಡದ ಲೀ ಚೀಯುಕ್ ಯುರನ್ನು ಸೋಲಿಸುವ ಮೂಲಕ ತಂಡ ಖಾತೆಯನ್ನು ತೆರೆಯಿತು. ಆ ಬಳಿಕ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ನಾರ್ಥ್ ಈಸ್ಟರ್ನ್ ಟ್ರಂಪ್ ಪಂದ್ಯವಾಗಿ ಆಡಿತು. ಬೊಡಿನ್ ಇಸ್ಸಾರ ಹಾಗೂ ಲೂಈ ಯಾಂಗ್ ಡೇ ಬೆಂಗಳೂರಿನ ಅರುಣ್ ಜಾರ್ಜ್ ಹಾಗೂ ರಿಯಾನ್ ಸುಪುತ್ರೋ ಜೋಡಿಯನ್ನು ಮಣಿಸಿ ನಾರ್ಥ್ ಈಸ್ಟರ್ನ್ 2-1 ರಿಂದ ಮುನ್ನಡೆ ಪಡೆಯುವಂತೆ ಮಾಡಿದರು

ತದನಂತರ ಮಹಿಳಾ ಸಿಂಗಲ್ಸ್​ನಲ್ಲಿ ನಾರ್ಥ್ ಈಸ್ಟರ್ನ್ ತಂಡದ ಮಿಚೆಲ್ ಲೀಯನ್ನು ರ್ಯಾಪ್ಟರ್ಸ್ ತಂಡದ ತೈ ಜು ಯಿಂಗ್ ಮಣಿಸಿ ಬೆಂಗಳೂರು ತಂಡ ಸಮಬಲ ಮಾಡಿಕೊಳ್ಳುವಂತೆ ಮಾಡಿದರು. ಬೆಂಗಳೂರು ತಂಡ ಮಿಶ್ರ ಡಬಲ್ಸ್​ಅನ್ನು ಟ್ರಂಪ್ ಮ್ಯಾಚ್ ಆಗಿ ಆಡಿತು. ಬೆಂಗಳೂರಿನ ಚಾನ್ ಪೆಂಗ್ ಸೂನ್ ಹಾಗೂ ಎಮ್ ಹ್ಯೂ ವೊನ್ ಜೋಡಿ 15-14, 14-15, 15-12 ಅಂತರದಿಂದ ಕೃಷ್ಣ ಪ್ರಸಾದ್ ಹಾಗೂ ಕಿಮ್ ಹಾ ನಾ ಜೋಡಿಯನ್ನು ಸೋಲಿಸಿ ಸತತ 2ನೇ ಬಾರಿ ಚಾಂಪಿಯನ್ ಆಯಿತು. ಅಂತಿಮ ಪುರುಷರ ಸಿಂಗಲ್ಸ್ ಮಹತ್ವ ಕಳೆದುಕೊಂಡಿತು. ಈ ಮೂಲಕ ಸತತ ಎರಡನೇ ಬಾರಿಗೆ ಬೆಂಗಳೂರು ರ‍್ಯಾಪ್ಟರ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

Story first published: Monday, February 10, 2020, 12:24 [IST]
Other articles published on Feb 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+