ಕೆನಡಾ ಓಪನ್ 2023: ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಪಿವಿ ಸಿಂಧು, ಲಕ್ಷ್ಯ ಸೇನ್: ಸಾಯಿ ಪ್ರಣೀತ್ ಔಟ್
ಕೆನಡಾ ಓಪನ್‌ನ ಮೊದಲ ಸುತ್ತಿನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಹಾಗೂ ಲಕ್ಷ್ಯ ಸೇನ್ ಗೆಲುವು ಸಾಧಿಸಿದ್ದು ಎರಡನೇ ಸುತ್ತಿಗೆ ಕಾಲಿಟ್ಟಿದ್ದಾರೆ. ತಮ್ಮ ತಮ್ಮ ಎದುರಾಳಿಗಳ ವಿರುದ್ಧ ಈ ಇಬ್ಬರು ಶಟ್ಲರ್‌ಗಳು ಕೂಡ ನೇರ ಸೆಟ್‌ಗಳ ಅಂತರದ ಗೆಲುವು ಸಾಧಿಸಿದ್ದು ಈ ಮೂಲಕ ಪ್ರಿ ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ಈ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕದೊಂದಿಗೆ ಕಣಕ್ಕಿಳಿದ ಸಿಂಧು ಬುಧವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ನ ವಿಭಾಗದ ಪಂದ್ಯದಲ್ಲಿ ಕೆನಡಾದ ತಾಲಿಯಾ ಎನ್‌ಜಿ ಅವರನ್ನು ಎದುರಿಸಿದರು. ಈ ಪಂದ್ಯದಲ್ಲಿ ಭಾರತದ ದಿಗ್ಗಜ ಆಟಗಾರ್ತಿ 21-16 21-9 ಅಂತರದ ಸುಲಭ ಜಯ ದಾಖಲಿಸಿದ್ದು ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

ಮತ್ತೊಂದೆಡೆ ಸೇನ್ ಎರಡನೇ ಶ್ರೇಯಾಂಕದ ಥಾಯ್ಲೆಂಡ್‌ನ ಕುನ್ಲವುತ್ ವಿಟಿಡ್ಸರ್ನ್‌ರನ್ ಅವರಿಂದ ತೀವ್ರ ಪೈಪೋಟಿ ಎದುರಿಸಿದರು. ಅಂತಿಮವಾಗಿ 21-18 21-15 ಅಂತರದಿಂದ ಭಾರತದ ಶಟ್ಲರ್ ಲಕ್ಷ್ಯ ಸೇನ್ ಗೆಲುವು ಸಾಧಿಸಿದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಇನ್ನು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಮುಂದಿನ ಸುತ್ತಿನಲ್ಲಿ ಜಪಾನ್‌ನ ನಟ್ಸುಕಿ ನಿದೈರಾ ವಿರುದ್ಧ ಆಡಲಿದ್ದು ಸೇನ್ ಬ್ರೆಜಿಲ್‌ನ ಯೊಗೊರ್ ಕೊಯೆಲ್ಹೋ ವಿರುದ್ಧ ಸೆಣಸಲಿದ್ದಾರೆ.
ಆದರೆ ಭಾರತದ ಮತ್ತೋರ್ವ ಶಟ್ಲರ್ ಬಿ ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿ ನಿರ್ಗಮಿಸಿದ್ದಾರೆ. ಸಾಯಿ ಪ್ರಣೀತ್ ಆರಂಭಿಕ ಸುತ್ತಿನಲ್ಲಿ ಕೊಯೆಲ್ಹೋ ಅವರನ್ನು ಎದುರಿಸಿದ್ದು 12-21 17-21 ಅಂತರದಿಂದ ನೇರ ಸೆಟ್‌ಗಳ ಸೋಲು ಅನುಭವಿಸಿದ್ದಾರೆ. ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಋತ್ವಿಕಾ ಶಿವಾನಿ ಗದ್ದೆ ಕೂಡ ಸೋಲು ಕಂಡಿದ್ದು ಥಾಯ್ಲೆಂಡ್‌ನ ಸುಪಾನಿದಾ ಕಟೆಥೋಂಗ್ ವಿರುದ್ಧ 12-21 3-21 ಅಂತರದಲ್ಲಿ ಸೋತು ನಿರ್ಗಮಿಸಿದ್ದಾರೆ.
ಇನ್ನು ಭಾರತದ ಪುರುಷರ ಡಬಲ್ಸ್ ಜೋಡಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ನೇರ ಗೇಮ್‌ಗಳ ಗೆಲುವಿನೊಂದಿಗೆ ಎರಡನೇ ಸುತ್ತಿಗೆ ಪ್ರವೇಶಿಶ ಪಡೆದುಕೊಂಡಿದ್ದರು. ಮತ್ತೊಂದೆಡೆ ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪರುಪಲ್ಲಿ ಕಶ್ಯಪ್ ತಮ್ಮ ಸುತ್ತಿನ ಸೆಣೆಸಾಟದಲ್ಲಿ ಸೋತು ನಿರ್ಗಮಿಸಿ ನಿರಾಸೆ ಮೂಡಿಸಿದ್ದಾರೆ. ಮಾಜಿ ವಿಶ್ವ ನಂ.6 ಆಟಗಾರ ಕಶ್ಯಪ್ 2018 ರಿಂದ ಬಿಡಬ್ಲ್ಯುಎಫ್ ಟೂರ್ನಿಯನ್ನು ಗೆಲ್ಲು ಸಾರ್ಧಯವಾಗಿಲ್ಲ. ಪ್ರಸ್ತುತ ಅವರು ಒಲಿಂಪಿಕ್ಸ್.ಕಾಮ್ ಪ್ರಕಾರ 189ನೇ ಶ್ರೇಯಾಂಕವನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications