ವರ್ಲ್ಡ್ ಟೂರ್ ಫೈನಲ್ಸ್: ವಿಶ್ವ ನಂ.1 ತೈ ಝು ಯಿಂಗ್ ಸೋಲಿಸಿದ ಸಿಂಧು

ಗುವಾಂಗ್ಝೌ, ಡಿಸೆಂಬರ್ 13: ಚೀನಾದ ಗುವಾಂಗ್ಝೌನಲ್ಲಿ ನಡೆಯುತ್ತಿರುವ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ವಿಶ್ವ ನಂ.1 ಆಟಗಾರ್ತಿ ತೈ ಝು ಯಿಂಗ್ ಅವರೆದುರು ಪಾರಮ್ಯ ಮೆರೆದಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಪದಕ ಗೆಲ್ಲೋದು ಖಚಿತ ಎಂಬ ಸಂದೇಶವನ್ನು ಸಿಂಧು ಸಾರಿದ್ದಾರೆ.
ಗುರುವಾರ (ಡಿಸೆಂಬರ್ 13) ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ತೈವಾನೀಸ್ ಆಟಗಾರ್ತಿ ತೈ ಝು ಯಿಂಗ್ ಅವರನ್ನು 14-21, 21-16, 21-18 ಅಂತರದಿಂದ ಹಿಮ್ಮೆಟ್ಟಿಸುವ ಮೂಲಕ ಮುನ್ನಡೆ ಸಾಧಿಸಿದರು. ಆರಂಭಿಕ ಪಂದ್ಯದಲ್ಲಿ ಸಿಂಧು, ವಿಶ್ವ ನಂ.2 ಆಟಗಾರ್ತಿ, ಹಾಲಿ ಚಾಂಪಿಯನ್ ಅಕೆನೆ ಯಮಾಗುಚಿ ಅವರನ್ನು ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದರು.
ಗ್ರೂಪ್ 'ಎ'ಯ ಅಂತಿಮ ಸುತ್ತಿನ ಪಂದ್ಯದಲ್ಲಿ ಸಿಂಧು, ಮಲೇಷ್ಯಾ ಆಟಗಾರ್ತಿ ಝಾಂಗ್ ಬೀವೆನ್ ಸವಾಲು ಸ್ವೀಕರಿಸಲಿದ್ದಾರೆ. ಶುಕ್ರವಾರ (ಡಿಸೆಂಬರ್ 14) ಈ ಕಾದಾಟ ನಡೆಯಲಿದೆ. ಇದರಲ್ಲಿ ಮುನ್ನಡೆ ಸಾಧಿಸಿ ಸಿಂಧು ಸೆಮಿಫೈನಲ್ ಹಾದಿ ಸುಲಭವಾಗಿಸೋದು ಬಹುತೇಕ ಖಚಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications