Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಥೈಲ್ಯಾಂಡ್ ಓಪನ್: ಭಾರತದ ಆಟಗಾರ್ತಿ ಪಿವಿ ಸಿಂಧುಗೆ ಸೋಲು

PV Sindhu bows out of Thailand Open after losing to Ratchanok Intanon

ಬ್ಯಾಂಕಾಕ್: ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಹೊರ ಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಸಿಂಧು, ಥೈಲ್ಯಾಂಡ್‌ ಆಟಗಾರ್ತಿ ರಾಟ್ಚನೋಕ್ ಇಂಟಾನನ್ ವಿರುದ್ಧ ಹಿನ್ನಡೆ ಕಂಡಿದ್ದಾರೆ.

ಟೂರ್ನಿಯಲ್ಲಿ ಬ್ಯಾಡ್ಮಿಂಟನ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 7ನೇ ಶ್ರೇಯಾಂಕಿತೆ ಸಿಂಧು 5ನೇ ಶ್ರೇಯಾಂಕಿತೆ ರಾಟ್ಚನೋಕ್ ಇಂಟಾನನ್ ವಿರುದ್ಧ 13-21, 9-21ರ ನೇರ ಸೆಟ್ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ.

ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಕಿಸೋನಾ ಸೆಲ್ವಾಡುರೆ ವಿರುದ್ಧ 21-10, 21-12ರ ನೇರಸೆಟ್ ಗೆಲುವು ದಾಖಲಿಸಿದ್ದ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂಧು, ರಾಟ್ಚನೋಕ್ ಎದುರು ಒಂದು ಗಂಟೆಗೂ ಮೊದಲೇ ಸೋಲೊಪ್ಪಿಕೊಂಡರು.

2019ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ಗೆದ್ದಿದ್ದ ಸಿಂಧು, ಈ ಬಾರಿ ನೀರಸ ಪ್ರದರ್ಶನ ನೀಡಿದ್ದು ಕಂಡುಬಂತು. ಎದುರಾಳಿ ಇಂಟಾನನ್‌ಗೆ ಸಿಂಧು ಉತ್ತಮ ಪೈಪೋಟಿಯೂ ನೀಡದೆ ತಲೆಬಾಗಿದರು.

Story first published: Friday, January 22, 2021, 23:58 [IST]
Other articles published on Jan 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+