Paris Olympics 2024: ಪಿವಿ ಸಿಂಧು ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸ; ವೃತ್ತಿಜೀವನದ ಬಗ್ಗೆ ತಿಳಿಯಿರಿ
ಜುಲೈ 8 ಸೋಮವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯದೆ. ಈ ಮೆಗಾ ಕ್ರೀಡಾಕೂಟದಲ್ಲಿ ಭಾರತದ ಹಲವು ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ.
ಭಾರತದ ಸ್ಟಾರ್ ಮಹಿಳಾ ಶಟ್ಲರ್ ಪಿವಿ ಸಿಂಧು ಕೂಡ ಈ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಪಿವಿ ಸಿಂಧು ಅವರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.

ಪಿವಿ ಸಿಂಧು ಬಾಲ್ಯ
ಪಿವಿ ಸಿಂಧು 5 ಜುಲೈ 1995 ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಸಿಂಧು ಅವರು ಪೂರ್ಣ ಹೆಸರು ಪುಸರಿಯಾ ವೆಂಕಟ್ ಸಿಂಧು. ಅವರ ಪೋಷಕರು ಆಂಧ್ರಪ್ರದೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ಆಡಿದ್ದಾರೆ. ಅವರ ತಂದೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು.
ಸಿಂಧು ತಮ್ಮ 8ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ಇದಾದ ನಂತರ ಅವರು ಗೋಪಿಚಂದ್ ಅಕಾಡೆಮಿಗೆ ಸೇರಿಕೊಂಡು ತಮ್ಮ ಅದ್ಭುತ ಆಟವನ್ನು ಮುಂದುವರೆಸಿದ್ದರು.
14ನೇ ವಯಸ್ಸಿಗೆ ಏಷ್ಯನ್ ಚಾಂಪಿಯನ್
2009ರಲ್ಲಿ ಸಿಂಧು 14ನೇ ವಯಸ್ಸಿನಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಕೊಲಂಬೊದಲ್ಲಿ ನಡೆದ ಸಬ್ ಜೂನಿಯರ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೊದಲ ಪದಕವನ್ನು ಗೆದ್ದರು.
ಇದಾದ ನಂತರ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಏಕೈಕ ಭಾರತೀಯರಾಗಿದ್ದಾರೆ. 2018ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಸಿಂಧು ಗೆದ್ದಿದ್ದಾರೆ.
ಒಲಿಂಪಿಕ್ಸ್ ಸಾಧನೆ
ಸಿಂಧು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಸತತ ಎರಡು ಪದಕಗಳನ್ನು ಗೆದ್ದ ಎರಡನೇ ವೈಯಕ್ತಿಕ ಕ್ರೀಡಾಪಟುವಾಗಿದ್ದಾರೆ. 2016ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು 2020ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಸಿಂಧು ಅವರು ಪ್ರಸ್ತುತ 12ನೇ ಶ್ರೇಯಾಂಕದಲ್ಲಿದ್ದಾರೆ. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಿಂಧು ಸತತ ಮೂರನೇ ಪದಕವನ್ನು ಭಾರತಕ್ಕೆ ಗೆದ್ದು ಕೊಡಲು ಸಜ್ಜಾಗಿದ್ದಾರೆ.
ಸಿಂಧು ಅವರಿಗೆ ಲಭಿಸಿದ ಪ್ರಶಸ್ತಿಗಳು
ಸಿಂಧು ಅವರಿಗೆ 2020ರಲ್ಲಿ ಪದ್ಮಭೂಷಣ, 2015ರಲ್ಲಿ ಪದ್ಮಶ್ರೀ, 2016ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು 2013ರಲ್ಲಿ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ಪಿವಿ ಸಿಂಧು ಅವರಿಂದ ಪದಕ ಗೆಲ್ಲುವ ಭರವಸೆ ಹೊಂದಿದೆ. ಸಿಂಧು ಅವರಿಗೆ ಇದು ಮೂರನೇ ಒಲಿಂಪಿಕ್ಸ್ ಆಗಲಿದೆ. ಸಿಂಧು ಅವರ ಸಂಪೂರ್ಣ ಗಮನ ಚಿನ್ನದ ಪದಕ ಗೆಲ್ಲುವತ್ತಲೇ ಇದೆ.
ಆದರೆ ಸಿಂಧು ಸ್ಪೇನ್‌ನ ಬ್ಯಾಡ್ಮಿಂಟನ್ ಆಟಗಾರ್ತಿ ಕ್ಯಾರೊಲಿನಾ ಮರಿನ್‌ರನ್ನು ಎದುರಲಿಸಲು ಸ್ವಲ್ಪ ಕಷ್ಟವಾಗಬಹುದು. ಏಕೆಂದರೆ ಈಗಾಗಲೇ ಸಿಂಧು ನಾಕೌಟ್ ಪಂದ್ಯಗಳಲ್ಲಿ 10 ಬಾರಿ ಮರಿನ್ ಕೈಯಲ್ಲಿ ಸೋಲು ಕಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications