ಚೀನಾ ಓಪನ್: ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು, ಸೈನಾ ಹೊರಕ್ಕೆ

ಬೀಜಿಂಗ್, ಸೆಪ್ಟೆಂಬರ್ 18: ಒಲಿಂಪಿಕ್ ಮತ್ತು ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರು ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಮಂಗಳವಾರ ಚೀನಾದ ಕ್ಸಿನ್ ಚೆಂಗ್ ಜಿಮ್ಮ್ಯಾಷಿಯಂ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ. 3 ಆಟಗಾರ್ತಿ ಸಿಂಧು ಅವರು ವಿಶ್ವ 39ನೇ ಶ್ರೇಯಾಂಕಿತೆ ಜಪಾನ್ ನ ಸಯೇನ ಕವಾಕಮಿ ಅವರನ್ನು 21-15, 21-13 ಅಂತರದಿಂದ ಸೋಲಿಸಿದರು.
ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ಸಿಂಧು ಜಪಾನ್ ಆಟಗಾರ್ತಿ ವಿರುದ್ಧ ಸುಲಭ ಮುನ್ನಡೆ ಸಾಧಿಸಿದರು. ಆದರೆ ಭಾರತದ ಮತ್ತೊಬ್ಬ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸೌತ್ ಕೊರಿಯಾದ ಸುಂಜಿ ಹ್ಯುನ್ ಎದುರು 20-22, 21-8, 21-14 ಅಂತರದಿಂದ ಸೋಲುವ ಮೂಲಕ ಪಂದ್ಯಾವಳಿಯಿಂದ ಹೊರ ಬಿದ್ದಿದ್ದಾರೆ.
Story first published: Tuesday, September 18, 2018, 15:10 [IST]
Other articles published on Sep 18, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications