ಫೈನಲ್‌ಗೇರಿದ ಸಿಂಧುಗೆ ಅಭಿನಂದನೆಗಳ ಮಹಾಪೂರ
ರಿಯೋ ಡಿ ಜನೈರೊ, ಆಗಸ್ಟ್ 18: ಒಲಿಂಪಿಕ್ಸ್ ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ಗೆ ಏರಿದ ಪಿವಿ ಸಿಂಧು ಅವರಿಗೆ ಟ್ವಿಟರ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸೆಮಿಫೈನಲ್ ನಲ್ಲಿ ಜಪಾನ್ ನ ಒಕುಹಾರ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿ ಫೈನಲ್ ಗೆ ಏರಿದ ಸಿಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ, ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.[ರಿಯೋ ಒಲಿಂಪಿಕ್ಸ್ : ಸಿಂಧು ಫೈನಲ್ ಪಂದ್ಯ ಯಾವಾಗ ಆರಂಭ?]
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ, ನಿಮ್ಮ ಇದೇ ಆಟವನ್ನು ಮುಂದುವರಿಸಿ-ನರೇಂದ್ರ ಮೋದಿ
ಪದಕದೊಂದಗೆ ದೇಶಕ್ಕೆ ಹಿಂದಿರುಗುತ್ತಿರುವ ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ- ಅಮಿತಾಬ್ ಬಚ್ಚನ್[ಕೋಟ್ಯಂತರ ಜನರ ಅಭಿಲಾಷೆ ಹೊತ್ತು ಫೈನಲ್‌ಗೆ ಸಿಂಧು ಲಗ್ಗೆ]
ಯಾರಾದರೂ ನನಗೆ ಹೇಳಿ, ಪಿವಿ ಸಿಂಧು ಆಡಿದ ಪಂದ್ಯದ ರೀ ಟೆಲಿಕಾಸ್ಟ್ ಯಾವಾಗ ಇದೆ- ರವಿನಾ ಟಂಡನ್
ಪಿವಿ ಸಿಂಧು ವಿಜಯದ ನಂತರ ಭಾರತದ ಅಭಿಮಾನಿಗಳ ಪ್ರತಿಕ್ರಿಯೆ-ಪರೇಶ್ ರಾವಲ್
ಎಂಥ ಅದ್ಭುತ ಆಟ, ಇತಿಹಾಸ ನಿರ್ಮಾಣವಾಯಿತು, ಇನ್ನೊಂದು ಪದಕ ತಂದುಕೊಟ್ಟಿದಕ್ಕೆ ಧನ್ಯವಾದ-ದೇವೇಂದ್ರ ಫಡ್ನವೀಸ್
ಪಿ ಸಿಂಧು, ಸಾಕ್ಷಿ ಮಲ್ಲಿಕ್ ಭಾರತದ ಎರಡು ಹೆಣ್ಣು ಮಕ್ಕಳು ಭಾರತದ ಗೌರವನ್ನು ಮತಷ್ಟು ಹೆಚ್ಚು ಮಾಡಿದರು-ರವಿ ಶಂಕರ್ ಪ್ರಸಾದ್
ಮತ್ತೊಬ್ಬ ಭಾರತದ ಮಗಳು ಇತಿಹಾಸ ನಿರ್ಮಿಸಿದ್ದಾಳೆ. ಪಿವಿ ಸಿಂಧು ನಿಮಗೊಂದು ಸೆಲ್ಯೂಟ್- ಕಪಿಲ್ ದೇವ್
ಪಿ ವಿ ಸಿಂಧು ನಿಮಗೆ ಅಭಿನಂದನೆಗಳು, ಚಿನ್ನ ತನ್ನಿ ಎನ್ನುವುದು ನಮ್ಮೆಲ್ಲರ ಹಾರೈಕೆ-ನಿರ್ಮಲಾ ಸೀತಾರಾಮನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications