ಚೀನಾ ಓಪನ್ ಬ್ಯಾಡ್ಮಿಂಟನ್: ದ್ವಿತೀಯ ಸುತ್ತಿಗೆ ಪ್ರವೇಶಿಸಿದ ಪಿವಿ ಸಿಂಧು

ಚಾಂಗ್ಝೌ, ನವೆಂಬರ್ 6: ಚೀನಾದ ಚಾಂಗ್ಝೌನಲ್ಲಿನ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ಕ್ಸಿಂಗ್ಚೆಂಗ್ ಜಿಮ್ನಾಷಿಯಂನಲ್ಲಿ ನಡೆಯುತ್ತಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರು ದ್ವಿತೀಯ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ಮಂಗಳವಾರ (ನವೆಂಬರ್ 6) ನಡೆದ ಮಹಿಳಾ ಸಿಂಗಲ್ಸ್ ನಲ್ಲಿ 23ರ ಹರೆಯದ ಸಿಂಧು, ರಷ್ಯಾ ಆಟಗಾರ್ತಿ ಎವೆಜಿನಿಯ ಕೊಸೆಟ್ಸ್ಕಾಯ ಅವರನ್ನು 21-13, 21-19 ಅಂತರದಿಂದ ಹಿಮ್ಮೆಟ್ಟಿಸಿದರು. ಇಬ್ಬರ ನಡುವೆ 29 ನಿಮಿಷಗಳ ಕಾದಾಟ ನಡೆಯಿತು.
ಪಂದ್ಯದ ಆರಂಭದಿಂದಲೂ ಸಿಂಧು ಪಾರಮ್ಯ ಮೆರೆಯುತ್ತಾ ಸಾಗಿದರು. ದ್ವಿತೀಯ ಸೆಟ್ ನಲ್ಲಿ ವಿಶ್ವ ನಂ.3 ಶ್ರೇಯಾಂಕಿತೆ ಸಿಂಧು ಎದುರು ಕೊಸೆಟ್ಸ್ಕಾಯ ಪ್ರಬಲ ಪೈಪೋಟಿ ನೀಡಿದರಾದರೂ, ಸಿಂಧು ಮೇಲುಗೈ ಸಾಧಿಸಿದರು. ಮಹಿಳಾ ಡಬಲ್ಸ್ ನಲ್ಲಿ ಭಾರತದ ಜೋಡಿ ಸಿಕ್ಕಿ ರೆಡ್ಡಿ-ಅಶ್ವಿನಿ ಪೊನ್ನಪ್ಪ ಸೋಲನುಭವಿಸಿದ್ದಾರೆ.
Story first published: Tuesday, November 6, 2018, 14:54 [IST]
Other articles published on Nov 6, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications