ಕೊರೊನಾ ಬಳಿಕ ಚೊಚ್ಚಲ ಟೂರ್ನಿಯಲ್ಲಿ ಆಡಲಿದ್ದಾರೆ ಪಿವಿ ಸಿಂಧು

ನವದೆಹಲಿ: ಕೊರೊನಾವೈರಸ್ ಕಾರಣದಿಂದಾಗಿ ವಿದೇಶಗಳಲ್ಲಿ ಪ್ರಯಾಣ ನಿರ್ಬಂಧಗಳಿವೆ. ಆದರೆ ಈ ನಿರ್ಬಂಧಗಳ ಹೊರತಾಗಿಯೂ ಟೂರ್ನಿಯ ಸಲುವಾಗಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರು ಯುನೈಟೆಡ್ ಕಿಂಗ್ಡಮ್‌ನಿಂದ ಥೈಲ್ಯಾಂಡ್‌ಗೆ ಹೋಗಲಿದ್ದಾರೆ.
ಕೊರೊನಾ ಭೀತಿ ಹೆಚ್ಚಾಗುತ್ತಿದ್ದ ಸಂದರ್ಭ ಇಂಗ್ಲೆಂಡ್‌ಗೆ ತೆರಳಿದ್ದ ಅಲ್ಲಿ ಅಭ್ಯಾಸ ನಡೆಸುತ್ತಿದ್ದರು. ಲಾಕ್‌ಡೌನ್ ವೇಳೆಯಲ್ಲಾಗಿದ್ದ ಮಾನಸಿಕ ತೊಳಲಾಟಗಳಿಂದ ಹೊರಬರಲು, ಫಿಟ್‌ಗೆ ಮರಳಲು ಸಿಂಧು ಯತ್ನಿಸುತ್ತಿದ್ದರು. ಅಲ್ಲಿಂದಲೇ ಜನವರಿಯಲ್ಲಿ ಸಿಂಧು ಥೈಲ್ಯಾಂಡ್‌ಗೆ ಹಾರಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಸಿಂಧು ಕಳೆದೆರಡು ತಿಂಗಳಿನಿಂದ ಲಂಡನ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಕೊರೊನಾ ಸುರುವಾದ ಬಳಿಕ ಥೈಲ್ಯಾಂಡ್‌ನಲ್ಲಿ ಸಿಂಧು ಚೊಚ್ಚಲ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜನವರಿ 3ರಂದು ಸಿಂಧು ಥೈಲ್ಯಾಂಡ್‌ಗೆ ತಲುಪಲಿದ್ದಾರೆ. ಬಳಿಕ ಅಲ್ಲಿ ಎರಡು ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಟೂರ್ನಿ ಜನವರಿ 12ರಿಂದ 17ರ ವರೆಗೆ ನಡೆದರೆ, ಎರಡನೇ ಟೂರ್ನಿ ಜನವರಿ 19ರಿಂದ 24ರ ವರೆಗೆ ನಡೆಯಲಿದೆ. ಪಿಟಿಐ ಜೊತೆ ಮಾತನಾಡಿರುವ ಸಿಂಧು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications