ಥಾಯ್ಲೆಂಡ್ ಓಪನ್: ಅಂತಿಮ 16ರ ಸುತ್ತಿಗೆ ಪ್ರವೇಶಿಸಿದ ಸಿಂಧು, ಪ್ರಣಯ್

ಬ್ಯಾಂಕಾಕ್, ಜುಲೈ 12: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಪಿವಿ ಸಿಂಧು ಮತ್ತು ಎಚ್ಎಸ್ ಪ್ರಣಯ್, ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ನಲ್ಲಿ ಕ್ರಮವಾಗಿ ವನಿತಾ, ಪುರುಷರ ವಿಭಾಗದಲ್ಲಿ ಜಯ ಸಾಧಿಸುವ ಮೂಲಕ ಪ್ರಿ-ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಮೊದಲ ಸುತ್ತಿನ ವನಿತಾ ಸಿಂಗಲ್ಸ್ ನಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಬಲ್ಗೇರಿಯಾದ ಲಿಂಡಾ ಝೆತ್ತಿರಿ ಅವರನ್ನು 21-8, 21-15ರ ನೇರ ಸೆಟ್ ನಿಂದ ಮಣಿಸಿದರು. ಮುಂದಿನ ಸುತ್ತಿನ ಸ್ಪರ್ಧೆಯಲ್ಲಿ ಹಾಂಕಾಂಗ್ ನ ಯಿಪ್ ಪುಯಿ ಯಿನ್ ವಿರುದ್ಧ ಸಿಂಧು ಸೆಣಸಾಡಲಿದ್ದಾರೆ.
ಪಾದದ ನೋವಿನ ಬಳಿಕ ಇದು ಎರಡನೇ ಪಂದ್ಯವನ್ನಾಡುತ್ತಿರುವ ಪ್ರಣಯ್, ಕಳೆದ ಬಾನುವಾರ 'ವೈಟ್ ನೈಟ್ಸ್' ಪ್ರಶಸ್ತಿ ವಿಜೇತ ಸ್ಪೇನ್ ನ ಪಾಬ್ಲೊ ಅಬಿಯನ್ ಅವರನ್ನು 21-16, 21-19ರ ನೇರ ಸೆಟ್ ನಿಂದ ಸೋಲಿಸಿದರು. ಈ ಪಂದ್ಯ ನಿಮಿಬುಟ್ ಕ್ರೀಡಾಂಗಣದಲ್ಲಿ ನಡೆದಿತ್ತು. ವಿಶ್ವ ನಂ. 4ನೇ ಆಟಗಾರ ಪ್ರಣಯ್ ನಾಳೆ ಇಂಡೋನೇಷ್ಯಾದ ಅನುಭವಿ ಆಟಗಾರ ಸೋನಿ ಡ್ವಿ ಕುನ್ಕೋರೋ ಅವರ ಸವಾಲು ಸ್ವೀಕರಿಸಲಿದ್ದಾರೆ.
ಮೊಣಕಾಲು ಗಾಯದಿಂದ ಚೇತರಿಸಿಕೊಂಡಿರುವ 2014ರ ಕಾಮನ್ವೆಲ್ತ್ ಚಾಂಪಿಯನ್ ಪಾರುಪಲ್ಲಿ ಕಶ್ಯಪ್ ಅವರು ಕೆನಡಾದ ಜೇಸನ್ ಆ್ಟನಿ ಹೊ-ಶುಯ್ ವಿರುದ್ಧ 21-15, 21-17ರ ನೇರ ಸೆಟ್ ಗೆಲುವು ದಾಖಲಿಸಿದರು. ಕಶ್ಯಪ್ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಜಪಾನ್ ನ ಕಾಂತಾ ಸುನೀಯಾಮಾ ಅವರನ್ನು ಎದುರುಗೊಳ್ಳಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಭಾರತದ ಮನು ಅತ್ರಿ ಮತ್ತು ಬಿ ಸುಮೀತ್ ಒಳಗೊಂಡ ಪುರುಷರ ಜೋಡಿ ಚೈನೀಸ್ ತೈಪೆಯ ಹುಂಗ್ ಲಿಂಗ್ ಮತ್ತು ವಾಂಗ್ ಚಿ ಲಿನ್ ಜೋಡಿಯನ್ನು 21-18, 15-21, 21-17 ಅಂತರದಿಂದ ಹಿಮ್ಮೆಟ್ಟಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications