For Quick Alerts
ALLOW NOTIFICATIONS  
For Daily Alerts

China Open: ಸಾತ್ವಿಕ್‌, ಚಿರಾಗ್ ಜೋಡಿ ಕ್ವಾರ್ಟರ್‌ಗೆ: ಸಿಂಧು ಮಣಿಸಿದ ಉನ್ನತಿ

ಭಾರತದ ಭರವಸೆಯ ಪುರುಷರ ಡಬಲ್‌ ಬ್ಯಾಡ್ಮಿಂಟನ್‌ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಚೀನಾ ಓಪನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜಪಾನ್‌ ಓಪನ್‌ನಲ್ಲಿ ನೀಡಿದ್ದ ಪ್ರದರ್ಶನವನ್ನು ಮರೆಸುವಂತೆ ಆಡಿದ ಭಾರತೀಯ ಜೋಡಿ ಅಬ್ಬರಿಸಿದೆ. ಈ ಮೂಲಕ ಚೀನಾ ಓಪನ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.

ಗುರುವಾರ ನಡೆದ ಪುರುಷರ ಡಬಲ್ಸ್‌ ಪಂದ್ಯದಲ್ಲಿ ಭಾರತದ ಪುರುಷರ ಜೋಡಿ ಎರಡು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿತು. ಈ ಜೋಡಿ 21-19 ಮತ್ತು 21-19 ರಿಂದ ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಂಡೋ ಮತ್ತು ಬಾಗಸ್ ಮೌಲಾನಾ ಅವರನ್ನು ಕೇವಲ 43 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿತು.

PV Sindhu HS Prannoy exit Satwik-Chirag storm into China Open quarters

ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿ ಗೆಲುವು ದಾಖಲಿಸಿ ಸಾಕಷ್ಟು ಬೆವರು ಹರಿಸಿತು. ಮೊದಲ ಗೇಮ್‌ನಲ್ಲಿ ಇಂಡೋನೇಷ್ಯಾ ಜೋಡಿ 8-6 ರಿಂದ ಮುನ್ನಡೆ ಸಾಧಿಸಿತ್ತು. ಆದರೆ ಕೊಂಚ ಹಿನ್ನಡೆ ಇದ್ರೂ ಸಹ ಧೃತಿ ಗೆಡದೆ ಆಟವಾಟಡಿದ ಭಾರತದ ಜೋಡಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿತು. ಈ ಗೇಮ್‌ನಲ್ಲಿ ಭಾರತೀಯ ಜೋಡಿ ಸತತ 5 ಅಂಕಗಳನ್ನು ಕಲೆ ಹಾಕಿ ಸೆಟ್‌ ಗೆದ್ದು ಬೀಗಿತು. ಎರಡನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಇಂಡೋನೇಷ್ಯಾದ ಆಟಗಾರರು ಆರಂಭದಲ್ಲಿ ಅಮೋಘ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ 16-14 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಆದರೆ ಭಾರತದ ಆಟಗಾರರು ಸೊಗಸಾದ ಗ್ಯಾಪ್ ಶಾಟ್‌ ಹಾಗೂ ಸ್ನ್ಯಾಷ್‌ಗಳನ್ನು ಪ್ರಯೋಗಿಸಿ ಅಂಕಗಳನ್ನು ಬಾಚಿಕೊಂಡು ಸುಲಭವಾಗಿ ಗೇಮ್ ತಮ್ಮದಾಗಿಸಿಕೊಂಡರು.

ಪ್ರಣಯ್‌ಗೆ ಸೋಲು

ಪುರುಷರ ಡಬಲ್ಸ್‌ನಲ್ಲಿ ಭಾರತದ ಆಟಗಾರರು ಅಮೋಘ ಪ್ರದರ್ಶನ ನೀಡಿದರೆ, ಪುರುಷರ ಸಿಂಗಲ್ಸ್‌ನಲ್ಲಿ ಸ್ಟಾರ್ ಆಟಗಾರ ಎಚ್‌ಎಸ್‌ ಪ್ರಣಯ್ ನಿರಾಸೆ ಅನುಭವಿಸಿದರು. ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್, ಮೊದಲ ಗೇಮ್‌ ಗೆದ್ದರು. ಆದರೆ ಮುಂದಿನ ಎರಡೂ ಗೇಮ್‌ಗಳಲ್ಲಿ ಅಂಕಗಳನ್ನು ಬಾಚಿಕೊಳ್ಳಲು ಪರದಾಟ ನಡೆಸಿದರು. ಪ್ರಣಯ್‌ 21-18, 15-21, 8-21 ರಿಂದ ಚೈನೀಸ್ ತೈಪೆ ಆಟಗಾರ ಚೌ ಟಿಯೆನ್ ಚೆನ್ ವಿರುದ್ಧ ಸೋತರು. ಈ ಪಂದ್ಯ 1 ಗಂಟೆ 5 ನಿಮಿಷಗಳ ಕಾಲ ನಡೆಯಿತು.

PV Sindhu HS Prannoy exit Satwik-Chirag storm into China Open quarters

ಸಿಂಧು ಮಣಿಸಿ ಉನ್ನತಿ

ಭಾರತದ ಇಬ್ಬರು ಬ್ಯಾಡ್ಮಿಂಟನ್ ಆಟಗಾರ್ತಿಯರು ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎದುರು ಬದರಾದರು. ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ ಎರಡು ಒಲಿಂಪಿಕ್ಸ್‌ ಪದಕ ವಿಜೇತೆ ಪಿವಿ ಸಿಂಧು ನಿರಾಸೆ ಅನುಭವಿಸಿದರು. ಇವರು ಭಾರತದ 17 ವರ್ಷದ ಉನ್ನತಿ ಹೂಡಾ ಅವರ ಸವಾಲು ಮೀರಿ ನಿಲ್ಲುವಲ್ಲಿ ವಿಫಲರಾದರು. ಉನ್ನತಿ ತನ್ನ ಆಟದ ಪ್ರದರ್ಶನವನ್ನು ನೀಡಿ ಅಂಕಗಳನ್ನು ಬಾಚಿಕೊಳ್ಳುತ್ತಾ ಸಾಗಿದರು. ಸಿಂಧು ತಾವು ಮಾಡಿಕೊಂಡ ತಪ್ಪುಗಳಿಂದಲೇ ಎದುರಾಳಿಗೆ ಅಂಕಗಳನ್ನು ನೀಡಿ ಕೈ ಸುಟ್ಟುಕೊಂಡರು. ಸಿಂಧು 16-21, 21-19, 13-21 ರಿಂದ ಪಂದ್ಯ ಕೈ ಚೆಲ್ಲಿ ನಿರಾಸೆ ಅನುಭವಿಸಿದರು.

Story first published: Thursday, July 24, 2025, 15:55 [IST]
Other articles published on Jul 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+