Malaysia Masters: ಈ ವರ್ಷದ ಮೊದಲ ಫೈನಲ್ ಪ್ರವೇಶಿಸಿದ ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು
ಮೇ 25 ಶನಿವಾರ, ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಮಾಜಿ ವಿಶ್ವ ಚಾಂಪಿಯನ್ ಹಾಗು ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಗೆಲುವು ಸಾಧಿಸಿದ್ದಾರೆ.
ಈ ಗೆಲುವಿನ ಮೂಲಕ ಈ ವರ್ಷದ ಮೊದಲ ಫೈನಲ್ ಪ್ರವೇಶಿಸಿದರು. ಥಾಯ್ಲೆಂಡ್‌ನ ಇನ್ ಫಾರ್ಮ್ ಬುಸಾನನ್ ಒಂಗ್‌ಬಾಮ್ರುಂಗ್‌ಫಾನ್ ವಿರುದ್ಧ 13-21, 21-16, 21-12 ಸೆಟ್‌ಗಳ ಅಂತರದಿಂದ ಪಿವಿ ಸಿಂಧು ಜಯ ಗಳಿಸಿದರು.

1 ಗಂಟೆ 28 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ನಲ್ಲಿ ಒಂಗ್‌ಬಾಮ್ರುಂಗ್‌ಫಾನ್ ಎದುರು ಪಿವಿ ಸಿಂಧು ಪ್ರಬಲ ಪಪೋಟಿ ನಡೆಸಿದರು. ಪಿವಿ ಸಿಂಧು ಮೊದಲ ಸೆಟ್‌ನಲ್ಲಿ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ 13-21 ರಿಂದ ಸೋತರು.
ಬಳಿಕ ಆಕ್ರಮಣಕಾರಿ ಆಟ ಆರಂಭಿಸಿದ ಪಿವಿ ಸಿಂಧು 21-16 ರಲ್ಲಿ ಬುಸಾನನ್‌ರನ್ನು ಸೋಲಿಸಿ 2ನೇ ಸೆಟ್ ಗೆದ್ದುಕೊಂಡರು. ನಂತರ ನಿರ್ಣಾಯಕ ಸೆಟ್‌ನಲ್ಲಿ ಸಿಂಧು ಯಾವುದೇ ತಪ್ಪುಗಳನ್ನು ಮಾಡಲಿಲ್ಲ. ಬುಸಾನನ್ ಅವರು ಆಕ್ರಮಣ ಮಾಡಲು ಯಾವುದೇ ಅವಕಾಶ ನೀಡದೆ 21-12 ರಲ್ಲಿ ಗೆದ್ದು ಮಲೇಷ್ಯಾ ಮಾಸ್ಟರ್ಸ್‌ನ ಫೈನಲ್‌ಗೆ ಲಗ್ಗೆ ಇಟ್ಟರು.
ಇದು ಸಿಂಧು ಅವರ ವರ್ಷದ ಮೊದಲ ಫೈನಲ್ ಮತ್ತು ಬಿಡ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 500 ಈವೆಂಟ್‌ನಲ್ಲಿ ನಾಲ್ಕನೇ ಪಂದ್ಯವಾಗಿದೆ. ಇದಕ್ಕೂ ಮುನ್ನ ಶುಕ್ರವಾರ ನಡೆದ ಪಂದ್ಯದಲ್ಲಿ ಪಿವಿ ಸಿಂಧು 21-13, 14-21, 21-12ರಲ್ಲಿ ಅಗ್ರ ಶ್ರೇಯಾಂಕದ ಚೀನಾದ ಹಾನ್ ಯು ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.
ಇದೀಗ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಸೋಲಿಸುವ ಮೂಲಕ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದ್ದಾರೆ. ಪಿವಿ ಸಿಂಧು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಚೀನಾದ ವಾಂಗ್ ಕ್ಸಿ ಯಿ ಅವರನ್ನು ಎದುರಿಸಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ 7 ಬ್ಯಾಡ್ಮಿಂಟನ್ ಆಟಗಾರರಿಗೆ ಟಿಕೆಟ್
ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ 7 ಬ್ಯಾಡ್ಮಿಂಟನ್ ಆಟಗಾರರು ಆರ್ಹತೆ ಪಡೆದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿರುವ ಪಿವಿ ಸಿಂಧು ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.
ಇನ್ನು ವಿಶ್ವದ 3ನೇ ಶ್ರೇಯಾಂಕದ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಧ್ವಜವನ್ನು ಹಾರಿಸಲು ರೆಡಿಯಾಗಿದ್ದಾರೆ. ಇತ್ತ ಮಹಿಳೆಯರ ಡಂಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications