ಆಲ್ ಇಂಗ್ಲೆಂಡ್ ಚಾಂಪಿಯನ್ ಷಿಪ್: ಪಿ ವಿ ಸಿಂಧುಗೆ ನಿರಾಸೆ
ಬರ್ಮಿಂಗ್ ಹ್ಯಾಮ್, ಮಾರ್ಚ್. 11 : ರಿಯೊ ಒಲಿಂಪಿಕ್ಸ್ ನ ಬೆಳ್ಳಿಪದಕ ವಿಜೇತೆ ಭಾರತದ ಸ್ಟಾರ್ ಶೆಟ್ಲರ್ ಪಿ ವಿ ಸಿಂಧು ಅವರು ಆಲ್ ಇಂಗ್ಲೆಂಡ್ ಚಾಂಪಿಯನ್ ಷಿಪ್ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡಿದ್ದಾರೆ.
ವಿಶ್ವದ ಐದನೇ ಶ್ರೇಯಾಂಕದ ಆಟಗಾರ್ತಿ ಭಾರತದ ಸಿಂಧು 14-21, 10-21 ಅಂತರದಲ್ಲಿ ವಿಶ್ವ ಅಗ್ರ ಶ್ರೇಯಾಂಕಿತೆ ಚೈನೀಸ್ ನ ತೈಪೆಯ ತೈ ಜು ಯೀಂಗ್ ವಿರುದ್ಧ ಸೋಲುಕಂಡರು. ಈ ಮೂಲಕ ತೈಜು ಅವರು ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಸೆಮಿಫೈನಲ್ ತಲುಪಿದರು.

ಪಂದ್ಯದ ಮೊದಲ ಗೇಮ್ ನಲ್ಲಿ ಸಿಂಧು 10-7ರಿಂದ ಮುನ್ನಡೆಯಲ್ಲಿದ್ದ ಸಿಂಧು ಅದನ್ನು ಕಾಪಾಡಿಕೊಳ್ಳುವಲ್ಲಿ ಎಡವಿದರು. ತೈಜು ಅವರ ಅಮೋಘ ಆಟದ ಮುಂದೆ ಸಿಂಧು ಬಸವಳಿದರು.
ಬಲಿಷ್ಠ ಸ್ಮ್ಯಾಷ್ ಗಳಿಂದ ತೈಜು ಪಾಯಿಂಟ್‌ಗಳನ್ನು ಕಲೆಹಾಕಿದರು. ಅಲ್ಲದೇ ಗೇಮ್ ನಲ್ಲಿ ಏಳು ಪಾಯಿಂಟ್‌ಗಳ ಅಂತರದಿಂದ ಸಿಂಧು ಅವರನ್ನು ಸೋಲಿಸಿದರು.
ಎರಡನೇ ಗೇಮ್ ನಲ್ಲಿ ಅರಂಭದಿಂದಲೇ ಅಕ್ರಮಣಕಾರಿ ಆಟವಾಡಿದ ತೈಜು 6-2 ರ ಮುನ್ನಡೆ ಸಾಧಿಸಿ ಗಮನ ಸೆಳೆದರು. ಸಿಂಧು ತಮ್ಮ ಖಾತೆಗೆ ಮತ್ತೊಂದು ಅಂಕ ಸೇರಿಸುವಷ್ಟರಲ್ಲಿ ತೈಜು ಅವರು ತಮ್ಮ ಪಾಯಿಂಟ್‌ಗಳನ್ನು 8ಕ್ಕೆ ಏರಿಸಿದ್ದರು. .
ತೈಜು 11-5ರ ಮುನ್ನಡೆ ಪಡೆದ ನಂತರ ಆಟಕ್ಕೆ ಮತ್ತಷ್ಟು ವೇಗ ನೀಡಿದರು. ಇದರಿಂದಾಗಿ ಸಿಂಧು ಒಂದೊಂದು ಅಂಕ ಗಳಿಸಲೂ ಕಷ್ಟಪಡಬೇಕಾಯಿತು.
ಎದುರಾಳಿಯ ರಕ್ಷಣಾ ತಂತ್ರಗಳು ಬಲಿಷ್ಠವಾಗಿದ್ದ ಕಾರಣ ಈ ಗೇಮ್‌ನಲ್ಲಿ ಸಿಂಧು ಕೇವಲ ಹತ್ತು ಅಂಕ ಗಳಿಸಲಷ್ಟೇ ಶಕ್ತರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications