Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವರ್ಲ್ಡ್ ಟೂರ್ ಫೈನಲ್ಸ್: ಹಾಲಿ ಚಾಂಪಿಯನ್ ಅಕೆನೆ ಸೋಲಿಸಿ ಸಿಂಧು ಮುನ್ನಡೆ

PV Sindhu makes winning start to World Tour Finals

ಗುವಾಂಗ್ಝೌ, ಡಿಸೆಂಬರ್ 12: ಚೀನಾದ ಗುವಾಂಗ್ಝೌನಲ್ಲಿ ನಡೆಯುತ್ತಿರುವ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧು ಮುನ್ನಡೆ ಸಾಧಿಸಿದ್ದಾರೆ. ಅದೂ ಹಾಲಿ ಚಾಂಪಿಯನ್ ಅಕೆನೆ ಯಮಾಗುಚಿ ಅವರನ್ನು ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದಾರೆ.

ಬುಧವಾರ (ಡಿಸೆಂಬರ್ 12) ನಡೆದ ಮಹಿಳಾ ಸಿಂಗಲ್ಸ್ ಆರಂಭಿಕ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು, ವಿಶ್ವ ನಂ.2ರ ಜಪಾನ್ ಆಟಗಾರ್ತಿ ಅಕೆನೆ ಅವರನ್ನು 24-22, 21-16ರ ನೇರ ಸೆಟ್‌ನಿಂದ ಸೋಲಿಸಿದರು. ಈ ಮೂಲಕ ಸಿಂಧು ಟೂರ್ನಿಯಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಇದು ಮೂರನೇ ಬಾರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಸಿಂಧು, ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಪಂದ್ಯಾಟದಲ್ಲಿ ರನ್ನರ್ಸ್ ಪ್ರಶಸ್ತಿ ಪಡೆದಿದ್ದರು. ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಸಮೀರ್ ವರ್ಮಾ ಅವರು ಜಪಾನ್ ಬಲಾಡ್ಯ ಕೆಂಟೊ ಮೊಮೊಟಾ ಅವರೆದುರು 18-21 6-21ರ ಅಂತರದಿಂದ ಸೋತಿದ್ದಾರೆ.

Story first published: Wednesday, December 12, 2018, 14:52 [IST]
Other articles published on Dec 12, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+