ಜಪಾನ್ ಓಪನ್: 2ನೇ ಸುತ್ತಿನಲ್ಲೇ ಟೂರ್ನಿಯಿಂದ ಹೊರಡೆದ ಪಿವಿ ಸಿಂಧು

ಟೊಕಿಯೋ, ಸೆಪ್ಟೆಂಬರ್ 13: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರು, ಜಪಾನ್‌ನಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎರಡನೇ ಸುತ್ತಿನಲ್ಲಿ ಟೂರ್ನಿಯಿಂದ ಹೊರನಡೆದಿದ್ದಾರೆ.
ವಿಶ್ವ ranking ನಲ್ಲಿ ಎರಡನೇ ಸ್ಥಾನದಲ್ಲಿರುವ ಪಿ.ವಿ.ಸಿಂಧು 14ನೇ ಸ್ಥಾನದಲ್ಲಿರುವ ಚೀನಾದ ಗಾವೋ ಫ್ಯಾಂಜಿಯಿ ಅವರ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತು ಮಖಂಭಂಗ ಅನುಭವಿಸಿದ್ದಾರೆ.
18-21, 19-21 ನೇರ ಸೆಟ್‌ಗಳಲ್ಲಿ ಪಿ.ವಿ.ಸಿಂಧು ಸೋತಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯ ಭರವಸೆ ಮೂಡಿಸಿದ್ದ ಪಿ.ವಿ.ಸಿಂಧು ಅವರು ಟೂರ್ನಿಯ ಆರಂಭದಲ್ಲೇ ಸೋತು ನಿರಾಸೆ ಮೂಡಿಸಿದ್ದಾರೆ.
ಸಿಂಧು ಅವರು ಮಾತ್ರವಲ್ಲದೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್.ಪ್ರಣೋಯ್ ಸಹ ಎರಡನೇ ಸುತ್ತಿನಲ್ಲಿಯೇ ಸೋತಿದ್ದಾರೆ. ಅವರು ಆಂಟೋನಿ ಗಿಂಟಿಂಗ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಭಾರತದ ಕೆ.ಶ್ರೀಕಾಂತ್ ಮಾತ್ರ ಟೂರ್ನಿಯಲ್ಲಿ ಉಳಿದುಕೊಂಡಿದ್ದು ಅವರು, ಕ್ವಾಟರ್ ಫೈನಲ್ ಪಂದ್ಯದಲ್ಲಿ ಹಾಂಕಾಂಗ್‌ನ ವಿನ್ಸೆಂಟ್ ವಾಂಗ್ ವಿರುದ್ಧ 21-15, 21-14 ರಿಂದ ಸೋಲಿಸಿದ್ದಾರೆ.
ಜಪಾನ್ ಓಪನ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಆಡುತ್ತಿಲ್ಲ, ಹಾಗಾಗಿ ಪಿ.ವಿ.ಸಿಂಧು ಅವರ ಮೇಲೆ ಭರವಸೆ ಇರಿಸಲಾಗಿತ್ತು. ಆದರೆ ಪಿ.ವಿ.ಸಿಂಧು ಎರಡನೇ ಸುತ್ತಿನಲ್ಲೇ ಟೂರ್ನಿಯಿಂದ ಹೊರಗುಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications