Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಮೂರನೇ ಒಲಿಂಪಿಕ್ಸ್‌ ಪದಕ ಗೆಲ್ಲುವ ಪಿವಿ ಸಿಂಧು ಕಸನು ನುಚ್ಚುನೂರು!

ಆಗಸ್ಟ್‌ 2 ಶುಕ್ರವಾರ, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಷಟ್ಲರ್ ಪಿವಿ ಸಿಂಧು ಅವರು ಸೋಲು ಕಂಡಿದ್ದಾರೆ. ಈ ಸೋಲಿನೊಂದಿಗೆ ಒಲಿಂಪಿಕ್ಸ್‌ ಸ್ಪರ್ಧೆಯಿಂದ ಪಿವಿ ಸಿಂಧು ಹೊರ ಬಿದ್ದಿದ್ದಾರೆ.

ಚೀನಾದ ಷಟ್ಲರ್‌ ಹೀ ಬಿಂಗ್‌ಝಾವೊ ವಿರುದ್ಧ ಪಿವಿ ಸಿಂಧು ಸೋತರು. ಸಿಂಧು ಎದುರು 19-21, 14-21 ಅಂತರದಲ್ಲಿ ಹೀ ಬಿಂಗ್‌ಝಾವೊ ಗೆಲುವು ಸಾಧಿಸಿದ್ದು, ಕ್ವಾಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

PV Sindhu out of Paris Olympics 2024

ಅಂತಿಮ ಘಟ್ಟದಲ್ಲಿ ಸೋತ ಸಿಂಧು ಅವರ ಸತತ ಮೂರನೇ ಒಲಿಂಪಿಕ್ ಪದಕ ಗೆಲ್ಲುವ ಕನಸು ಗುರುವಾರ ನುಚ್ಚುನೂರಾಗಿದೆ. ಇದರೊಂದಿಗೆ ಭಾರತೀಯರ ನಿರೀಕ್ಷೆ ಹುಸಿಯಾಗಿದೆ. ಈವರಗೆ ಪ್ಯಾರಿಸ್‌ನಲ್ಲಿ ಗುಂಪು ಹಂತದ ಪಂದ್ಯಗಳಲ್ಲಿ ಸಿಂಧು ಸೋತಿರಲಿಲ್ಲ.

ಚೀನಾದ ಶಟ್ಲರ್‌ನ ಶಕ್ತಿಶಾಲಿ ಸ್ಮ್ಯಾಶ್‌ಗಳಿಗೆ ಸಿಂಧು ಯಾವುದೇ ಪ್ರತಿರೋಧ ವ್ಯಕ್ತಪಡಿಸಲಿಲ್ಲ. ಹೀಗಾಗಿ ಸತತ ಎರಡು ಸೆಟ್‌ಗಳಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಜಿಯಾವೊ ಅವರು ಭರ್ಜರಿ ಗೆಲುವು ದಾಖಲಿಸಿದರು.

ನಾಕೌಟ್ ಹಂತಕ್ಕೆ ಮುನ್ನಡೆಯಲು ತನ್ನ ಗುಂಪಿನಲ್ಲಿ ಪಿವಿ ಸಿಂಧು ಅಗ್ರಸ್ಥಾನದಲ್ಲಿದ್ದರು. ಆದರೆ ಈ ಹಿಂದೆ ಕ್ರಮವಾಗಿ ರಿಯೊ ಡಿ ಜನೈರೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದ ಸಿಂಧು ಈ ಬಾರಿ ಪ್ಯಾರಸ್‌ನಲ್ಲಿ ತನ್ನ ಚಮತ್ಕಾರ ತೋರಿಸಲು ಸಾಧ್ಯವಾಗಲಿಲ್ಲ.

Story first published: Friday, August 2, 2024, 0:17 [IST]
Other articles published on Aug 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+