ಮರಿನ್ ಸೋಲಿಸಿ, ಇಂಡಿಯನ್ ಓಪನ್ ಗೆದ್ದ ಪಿವಿ ಸಿಂಧು
ನವದೆಹಲಿ, ಏಪ್ರಿಲ್ 02: ಇಂಡಿಯನ್ ಓಪನ್ ಸೂಪರ್ ಸೀರಿಸ್ 2017ರಲ್ಲಿ ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ವಿಶ್ವದ ನಂ.1 ಆಟಗಾರ್ತಿಯನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ಒಲಿಂಪಿಕ್ಸ್ ನ ಅಂತಿಮ ಹಣಾಹಣಿಯ ರಿಪೀಟ್ ಪಂದ್ಯದಂತೆ ಇದ್ದ ಫೈನಲ್ಸ್ ನಲ್ಲಿ ಸ್ಪೇನಿನ ಮರಿನ್ ವಿರುದ್ಧ ಸಿಂಧು ಸೇಡು ತೀರಿಸಿಕೊಂಡಿದ್ದಾರೆ.ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಸಿಂಧು ಅವರು 21-19, 21-16ರಲ್ಲಿ ಮರಿನ್ ರನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟರು.

ರಿಯೋ ಒಲಿಂಪಿಕ್ಸ್ ನಲ್ಲಿ ಅಂತಿಮ ಹಣಾಹಣಿಯಲ್ಲಿ ಸ್ಪೇನಿನ ಕರೋಲಿನ್ ಮರೀನ್ ಅವರು ಗೆಲುವು ಸಾಧಿಸಿದ್ದರು. ಸಿಂಧು ಅವರು ಬೆಳ್ಳಿಗೆ ತೃಪ್ತಿ ಪಟ್ಟಿದ್ದರು.
ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಸಿಂಧು, ದುಬೈ ಫೈನಲ್ಸ್ ನಲ್ಲಿ ನಾನು ಜಯ ಗಳಿಸಿದ್ದೆ. ಪಿಬಿಎಲ್ ನಲ್ಲಿ ನನ್ನನ್ನು ಆಕೆ ಸೋಲಿಸಿದರು. ಈಗ ದೆಹಲಿಯಲ್ಲಿ ಉತ್ತಮ ಬೆಂಬಲದೊಂದಿಗೆ ಜಯದ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದರು.
ಚೀನಾ ಓಪನ್ ಸೀರಿಸ್, ಹಾಂಕಂಗ್ ಓಪನ್ ಫೈನಲ್, ಪ್ರೀಮಿಯರ್ ಬಾಡ್ಮಿಂಟನ್ ಲೀಗ್ (ಪಿಬಿಎಲ್) ನಲ್ಲಿ ಚೆನ್ನೈ ಸ್ಮಾಶರ್ಸ್ ಗೆ ಕಪ್, ಸೈಯದ್ ಮೋದಿ ಇಂಟರ್ ನ್ಯಾಷನಲ್ ಗ್ರಾನ್ ಪ್ರೀಯಲ್ಲಿ ಜಯದೊಂದಿಗೆ ವರ್ಷಾರಂಭ ಮಾಡಿದ ಸಿಂಧು ಈಗ ಇಂಡಿಯನ್ ಓಪನ್ ಸೀರಿಸ್ ಫೈನಲ್ ತಲುಪಿದ್ದಾರೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications