Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದ ಸ್ಟಾರ್ ಶಟ್ಲರ್ ಪಿವಿ ಸಿಂಧು

PV Sindhu pulls out of Denmark Open

ನವದೆಹಲಿ: ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಭಾರತದ ಸ್ಟಾರ್ ಶಟ್ಲರ್ ಪಿಸಿ ಸಿಂಧು ಅವರು ಮುಂದಿನ ತಿಂಗಳು ನಡೆಯಲಿರುವ ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಒಡೆನ್ಸ್‌ನಲ್ಲಿ ಅಕ್ಟೋಬರ್ 13ರಿಂದ 18ರ ವರೆಗೆ ಡೆನ್ಮಾರ್ಕ್ ಓಪನ್ ಟೂರ್ನಿ ನಡೆಯಲಿದೆ.

'ಡೆನ್ಮಾರ್ಕ್ ಓಪನ್‌ನಲ್ಲಿ ಪಿವಿ ಸಿಂಧು ಆಡುತ್ತಿಲ್ಲ, ಟೂರ್ನಿಯಿಂದ ಅವರು ಹಿಂದೆ ಸರಿದಿದ್ದಾರೆ,' ಎಂದು ಗೋಪಿಚಂದ್ ಅಕಾಡೆಮಿಯ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ. ಆದರೆ ಭಾರತದ ಮತ್ತೊಬ್ಬ ಆಟಗಾರ್ತಿ ಸೈನಾ ನೆಹ್ವಾಲ್ ಡೆನ್ಮಾರ್ಕ್ ಓಪನ್‌ನಲ್ಲಿ ಆಡಲಿದ್ದಾರೆ.

25ರ ಹರೆಯದ ಸಿಂಧು ಥಾಮಸ್ ಆ್ಯಂಡ್ ಉಬರ್ ಕಪ್ ಫೈನಲ್‌ನಿಂದಲೂ ಹಿಂದೆ ಸರಿದಿದ್ದರು. ಆದರೆ ಆ ಬಳಿಕ ಟೂರ್ನಿಯಲ್ಲಿ ಆಡುತ್ತೇನೆಂದು ಹೇಳಿದ್ದರು. ಅಷ್ಟರ ವೇಳೆಗೆ ಥಾಮಸ್ ಆ್ಯಂಡ್ ಉಬರ್ ಕಪ್ ಫೈನಲ್‌ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿತು.

ಕೋವಿಡ್-19 ಭೀತಿ ಇರುವುದರಿಂದ ಡೆನ್ಮಾರ್ಕ್ ಓಪನ್‌ಗಾಗಿ ಪ್ರಯಾಣಿಸುವ ಆಟಗಾರರು ಅವರ ವೈಯಕ್ತಿಕ ಜವಾಬ್ದಾರಿ ಹೊರಬೇಕೆಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಮಂಗಳವಾರ ಹೇಳಿತ್ತು. ಇದರ ಬೆನ್ನಲ್ಲೇ ಸಿಂಧು ಈ ನಿರ್ಧಾರ ಪ್ರಕಟಿಸಿದ್ದಾರೆ.

Story first published: Friday, September 18, 2020, 10:00 [IST]
Other articles published on Sep 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+