ನವದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಇಂಡೋನೇಷ್ಯಾ ಮಾಸ್ಟರ್ಸ್ 500 ಪಂದ್ಯಾವಳಿಯಿಂದ ಹೊರಬಿದ್ದರು. ಇವರು ಟೂರ್ನಿಯಲ್ಲಿ ಸೋತು ಹೊರ ನಡೆದಕ್ಕಿಂತಲೂ, ರೆಡ್ ಕಾರ್ಡ್ ನೀಡಿದ್ದು ಸದ್ಯ ಚರ್ಚಾ ವಸ್ತುವಾಗಿದೆ. ಹಾಗಿದ್ದರೆ ಪಿವಿ ಸಿಂಧು ಅವರಿಗೆ ರೆಡ್ ಕಾರ್ಡ್ ನೀಡಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಶುಕ್ರವಾರ ನಡೆದ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು 13-21, 17-21 ಅಂತರದಲ್ಲಿ ಚೀನಾದ ಆಟಗಾರ್ತಿ ವಿರುದ್ಧ ಸೋಲು ಕಂಡರು. ಸಿಂಧು ಅವರು ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದೇ ವೇಳೆ ಸಿಂಧು ಅವರಿಗೆ ಪಂದ್ಯದ ವೇಳೆ ಒಮ್ಮೆ ಹಳದಿ ಕಾರ್ಡ್ ನೀಡಲಾಯಿತು. ಅಲ್ಲದೆ ಇನ್ನೊಮ್ಮೆ ಮ್ಯಾಚ್ ರೆಫರಿ ಮಧ್ಯಪ್ರವೇಶಿಸಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅವರ ನಡುವಿನ ಪರಿಸ್ಥಿತಿಯನ್ನು ಶಾಂತಗೊಳಿಸಲಾಯಿತು.

ಚೆನ್ ಯು ಫೀ ಮೊದಲ ಗೇಮ್‌ನಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಈ ಗೇಮ್‌ನಲ್ಲಿ ಸಿಂಧು ಪ್ರತಿ ಸವಾಲನ್ನು ಮೆಟ್ಟಿನಿಂತರು. ಆಟದ ಕೊನೆಯಲ್ಲಿ ಸಿಂಧು ಕೆಲವು ಅತ್ಯುತ್ತಮ ನೆಟ್ ಶಾಟ್‌ಗಳನ್ನು ಬಾರಿಸಿದರು, ಆದರೆ ಅದು ತುಂಬಾ ತಡವಾಗಿತ್ತು. ಶುಕ್ರವಾರ ನಡೆದ ಪಂದ್ಯದಲ್ಲಿ ಸಿಂಧು ಹಿನ್ನಡೆಯನ್ನು ಅನುಭವಿಸಿದರು. ಸಿಂಧು ಅವರು ಎದುರಾಳಿ ಆಟಗಾರ್ತಿಯ ಭರ್ಜರಿ ಆಟದ ಮುಂದೆ ಮಂಡಿಯೂರಿದರು.
ಸಿಂಧು ಪಂದ್ಯದ ಆರಂಭದಲ್ಲೇ ತಮ್ಮ ಎರಡು ರಿವ್ಯೂಗಳನ್ನು ಬಳಸಿದ್ದ ಸಿಂಧು ಅವರಿಗೆ, ವಿವಾದಾತ್ಮಕ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಆಗಲಿಲ್ಲ. ಇದರಿಂದ ಅಸಮಾಧಾನಗೊಂಡ ಸಿಂಧು ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಈ ನಡುವಳಿಕೆಗೆ ಅವರಿಗೆ ಮೊದಲು ಹಳದಿ ಕಾರ್ಡ್ ನೀಡಲಾಯಿತು. ಹಳದಿ ಕಾರ್ಡ್ ಸ್ವೀಪಕರಿಸಿದ ಬಳಿಕ ಸಿಂಧು ಅವರು ಸರ್ವ್ ಸರ್ವ್ ಸ್ವೀಕರಿಸಲು ಸಿದ್ಧರಾಗುವಾಗ ವಿಳಂಬ ಮಾಡಿದರು ಎಂಬ ಕಾರಣಕ್ಕೆ ಅಂಪೈರ್ ಅವರಿಗೆ ರೆಡ್ ಕಾರ್ಡ್ ತೋರಿಸಿದರು. ಬ್ಯಾಡ್ಮಿಂಟನ್ ನಿಯಮದಂತೆ ರೆಡ್ ಕಾರ್ಡ್ ಒಂದು ಪಾಯಿಂಟ್ ಬಿಟ್ಟುಕೊಡುವುದು ಎಂದರ್ಥ.
ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಥೈಲ್ಯಾಂಡ್‌ನ 21 ವರ್ಷದ ಪಣಿಚಪೋನ್ ತಿರರತ್ಸಕುಲ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತರು. ಲಕ್ಷ್ಯ ಸೇನ್ ವಿಶ್ವದ 44 ನೇ ಶ್ರೇಯಾಂಕಿತ ಪಣಿಚಪೋನ್ ವಿರುದ್ಧ 20-18, 22-20 ಅಂತರದಲ್ಲಿ ಸೋತರು.