ಬಾಡ್ಮಿಂಟನ್ ತಾರೆ ಸಿಂಧು ಈಗ ವಿಶ್ವದ ನಂ. 2
ನವದೆಹಲಿ, ಏಪ್ರಿಲ್ 06: ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮೊಟ್ಟಮೊದಲ ಬಾರಿಗೆ ವಿಶ್ವ ನಂ. 2 ಶ್ರೇಯಾಂಕಕ್ಕೇರಿ ಹೊಸ ದಾಖಲೆ ನಿರ್ವಿುಸಿದ್ದಾರೆ.
ವೃತ್ತಿ ಜೀವನದಲ್ಲಿ 21 ವರ್ಷದ ಸಿಂಧು ಅವರ ಗರಿಷ್ಠ ಸಾಧನೆ ಇದಾಗಿದ್ದು, ಜಪಾನ್ನ ಅಕನೆ ಯಮುಗಚಿ ಅವರನ್ನು ಹಿಂದಿಕ್ಕಿ ಸಿಂಧು ನಂ.2 ಸ್ಥಾನಕ್ಕೇರಿದ್ದಾರೆ.[ಇಂಡಿಯನ್ ಓಪನ್ ಗೆದ್ದ 'ಸೂಪರ್' ಸಿಂಧು ಹೊಗಳಿದ ಸಚಿನ್!]

ಸೈನಾ ನೆಹ್ವಾಲ್ ನಂತರ ಬಾಡ್ಮಿಂಟನ್ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ನಂ. 2 ಸ್ಥಾನಕ್ಕೇರಿದ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ್ತಿ ಎಂಬ ಕೀರ್ತಿಗೆ ಸಿಂಧು ಪಾತ್ರರಾಗಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಓಪನ್ ಸೂಪರ್ ಸೀರಿಸ್ ಟೂರ್ನಿಯಲ್ಲಿ ಒಲಿಂಪಿಕ್ ಸ್ವರ್ಣ ವಿಜೇತೆ, ಅಗ್ರಗಣ್ಯ ಆಟಗಾರ್ತಿ ಸ್ಪೇನಿನ ಕರೊಲಿನಾ ಮರಿನ್ ಅವರನ್ನು ಮಣಿಸಿದ್ದರು.
ಚೊಚ್ಚಲ ಬಾರಿಗೆ ಈ ಪ್ರಶಸ್ತಿ ಗೆದ್ದ ಹೈದರಾಬಾದಿನ ಸಿಂಧು ಹೊರತುಪಡಿಸಿದರೆ, ಭಾರತದ ಯಾವೊಬ್ಬ ಆಟಗಾರರು ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಚೀನಾ ತೈಪೈನ ತೈ ಜು ಯಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಮರಿನ್ ಅವರು 75664 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಪುರುಷರ ಬಾಡ್ಮಿಂಟನ್ ಆಟಗಾರರ ಪೈಕಿ ಅಜಯ್ ಜಯರಾಮ್ ಅವರು 20ನೇ ಸ್ಥಾನ ಪಡೆದುಕೊಂಡಿದ್ದಾರೆ.(ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications