ಪಿವಿ ಸಿಂಧು 'ನಿವೃತ್ತಿ' ಟ್ವೀಟ್ ಅರ್ಥವಾಗದೆ ತಲೆ ಕೆರೆದುಕೊಂಡ ನೆಟ್ಟಿಗರು

ನವದೆಹಲಿ: ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಗಮನ ಸೆಳೆದಿತ್ತು. 'ಐ ರಿಟೈರ್ (ನಾನು ನಿವೃತ್ತಿ)' ಎಂಬ ರೀತಿಯಲ್ಲಿ ಸಿಂಧು ಮಾಡಿದ್ದ ಪೋಸ್ಟ್ ಭಾರೀ ಸಂಚಲನವುಂಟು ಮಾಡಿತ್ತು. ಆದರೆ ಅಸಲಿಗೆ ಸಿಂಧು ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿಲ್ಲ. ಬದಲಿಗೆ ಸಿಂಧು ಕ್ರೀಡಾಭಿಮಾನಿಗಳಿಗೆ ಚಮಕ್ ನೀಡಿದ್ದರಷ್ಟೇ.
ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿವಿ ಸಿಂಧು ಸದ್ಯ ಫಿಟ್‌ನೆಸ್ ಮತ್ತು ಪೌಷ್ಠಿಕತೆ ಹೆಚ್ಚಿಸಿಕೊಳ್ಳಲು ಲಂಡನ್‌ನ ಗ್ಯಾಟೋರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಯಲ್ಲಿದ್ದಾರೆ. ನವೆಂಬರ್ 2ರಂದು 'ನಾನು ನಿವೃತ್ತಿ' ಎಂದು ಟ್ವೀಟ್ ಮಾಡಿದ್ದ ಸಿಂಧು, ಅಭಿಮಾನಿಗಳಿಗೆ ಮಿನಿ ಹೃದಯಾಘಾತ ನೀಡಿದ್ದರು.
'ನನ್ನ ಭಾವನೆಗಳಿಂದ ಸ್ವಚ್ಛವಾಗಿ ಹೊರಬರಲು ಈಗಿನಿಂದಲೇ ನಾನು ಯೋಚಿಸುತ್ತಿದ್ದೇನೆ. ನಾನು ಈ ಭಾವನೆಗಳನ್ನು ಎದುರುಗೊಳ್ಳಲು ಹೆಣಗಾಡುತ್ತಿದ್ದೇನೆ. ಅದು ತುಂಬಾ ತಪ್ಪೆಂದು ಅನ್ನಿಸುತ್ತದೆ,' ಅಂತೆಲ್ಲ ಉದ್ದಕ್ಕೆ ಸಿಂಧು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ಕೊನೆಗೆ ತಾನು ಕೊರೊನಾ ಸಂದರ್ಭದಲ್ಲಿ ಇಕ್ಕಟ್ಟಿನ, ತಳಮಳದ, ಭೀತಿಯ ಭಾವನೆ, ನಕಾರಾತ್ಮಕತೆಗೆ ನಿವೃತ್ತಿ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.

ಸಿಂಧು ಅವರು ಕೊರೊನಾ ಹೊತ್ತಿನಲ್ಲಿ ಪಾಸಿಟಿವ್ ಆಗಿರಬೇಕು ಎಂಬರ್ಥದಲ್ಲಿ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಚಮಕ್ ನೀಡಿದ್ದರು. ಆದರೆ ಬಹುತೇಕ ನೆಟ್ಟಿಗರಿಗೆ ಸಿಂಧು ಅವರ ಟ್ವೀಟು, ಅವರ ಮಾರುದ್ದದ ಸಾಲುಗಳು ಅರ್ಥವಾಗದೆ ಕೆಲವರು ತಲೆ ಕೆರೆದುಕೊಂಡಿದ್ದಾರೆ. ಇನ್ನೂ ಕೆಲವು ಅಸಮಾಧಾನದಿಂದ ಸಿಂಧು ವಿರುದ್ಧ ಸಿಡುಕಿ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications