ಹಾಂಕಾಂಗ್ ಓಪನ್: ಪಿವಿ ಸಿಂಧು, ಸಮೀರ್ ವರ್ಮಾ ದ್ವಿತೀಯ ಸುತ್ತಿಗೆ ಪ್ರವೇಶ

ಹಾಂಕಾಂಗ್, ನವೆಂಬರ್ 14: ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಮತ್ತು ಸಮೀರ್ ವರ್ಮಾ, ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಬುಧವಾರ (ನವೆಂಬರ್ 14) ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸಿಂಧು, ಸಮೀರ್ ಮುನ್ನಡೆ ಸಾಧಿಸಿದರು.
ವಿಶ್ವ ನಂ.3 ಆಟಗಾರ್ತಿ ಸಿಂಧು ಅವರು ಥೈಲ್ಯಾಂಡ್‌ನ ನಿಚ್ವಾನ್ ಜಿಂದಾಪೊಲ್ ಅವರನ್ನು 21-15, 13-21, 21-17 ಅಂತರದಿಂದ ಸೋಲಿಸಿದರು. ದ್ವಿತೀಯ ಸೆಟ್ ನಲ್ಲಿ ಎದುರಾಳಿ ಕೊಂಚ ಪ್ರಖರ ಆಟ ಪ್ರದರ್ಶಿಸಿದ್ದು ಬಿಟ್ಟರೆ, ಉಳಿದಂತೆ ಸಿಂಧು ನಿಚ್ವಾನ್ ಅವರನ್ನು ಸುಲಭವಾಗಿ ಹಿಮ್ಮೆಟ್ಟಿಸಿದರು. ಥೈಲ್ಯಾಂಡ್ ಆಟಗಾರ್ತಿಯ ಎದುರು ಸಿಂಧುಗೆ ಲಭಿಸುತ್ತಿರುವ ನಾಲ್ಕನೇ ಜಯವಿದು.
ಈ ಸೀಸನ್ ನಲ್ಲಿ ಕಾಮನ್ವೆಲ್ತ್‌ಗೇಮ್ಸ್, ವರ್ಲ್ಡ್ ಚಾಂಪಿಯನ್‌ಶಿಪ್, ಏಷ್ಯನ್ ಗೇಮ್ಸ್ ಈ ಮೂರು ಪ್ರಮುಖ ಟೂರ್ನಿಗಳಲ್ಲಿ ಬೆಳ್ಳಿ ಜಯಿಸಿರುವ ಸಿಂಧು ಮುಂದಿನ ಸುತ್ತಿನಲ್ಲಿ ಕೊರಿಯಾದ ಸುಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಸಮೀರ್ ಅವರು ಥೈ ಆಟಗಾರ ಸುಪನ್ಯು ಅವಿಹಿಂಗ್ಸನನ್ ಅವರನ್ನು 21-17, 21-14ರ ನೇರ ಸೆಟ್ ನಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಸಮೀರ್, ಒಲಿಂಪಿಕ್ ಚಾಂಪಿಯನ್, ಚೀನಾದ ಚೆಂಗ್ ಲಾಂಗ್ ಅವರ ಸವಾಲು ಸ್ವೀಕರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications