ಆಸ್ಟ್ರೇಲಿಯಾ ಓಪನ್ 2019: ಪಿವಿ ಸಿಂಧು, ಸಮೀರ್ ವರ್ಮಾ ಶುಭಾರಂಭ

ಸಿಡ್ನಿ, ಜೂನ್ 5: ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಮತ್ತು ಸಮೀರ್ ವರ್ಮಾ ಶುಭಾರಂಭ ಕಂಡಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಇಬ್ಬರೂ ಮುನ್ನಡೆ ಗಿಟ್ಟಿಸಿದ್ದಾರೆ.
ವಿಶ್ವ ನಂ.5ನೇ ಆಟಗಾರ್ತಿ, ರಿಯೋ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದಿದ್ದ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಇಂಡೋನೇಷ್ಯಾದ ಚೊಯಿರುನ್ನಿಸಾ ಎದುರು 21-14, 21-9ರ ನೇರ ಸೆಟ್ ಜಯ ದಾಖಲಿಸಿದರು. ಮುಂದಿನ ಪಂದ್ಯದಲ್ಲಿ ಸಿಂಧು ಥೈಲ್ಯಾಂಡ್‌ನ ಅನುಭವಿ ಆಟಗಾರ್ತಿ ನಿಚ್ವಾನ್ ಜಿಂದಾಪೋಲ್ ಸವಾಲು ಸ್ವೀಕರಿಸಲಿದ್ದಾರೆ.
ಪುರುಷರ ವಿಭಾಗದ ಸಿಂಗಲ್ಸ್ ಸ್ಪರ್ಧೆಯಲ್ಲಿ ವಿಶ್ವ ನಂ.12ನೇ ಆಟಗಾರ ಸಮೀರ್ ವರ್ಮಾ ಅವರು ಮಲೇಷ್ಯಾದ ಲೀ ಝೈ ಜಿಯಾ ಅವರನ್ನು 21-15, 16-21, 21-12ರಿಂದ ಮಣಿಸಿ ಮುಯ್ಯಿ ತೀರಿಸಿಕೊಂಡರು. ಕಳೆದ ತಿಂಗಳು ಸುದಿರ್ಮನ್ ಕಪ್‌ನಲ್ಲಿ ಇದೇ ಝೈ ಜಿಯಾ ವಿರುದ್ಧ ಸಮೀರ್ ಸೋತಿದ್ದರು.
Story first published: Wednesday, June 5, 2019, 17:11 [IST]
Other articles published on Jun 5, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications