ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ 3ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಿಂಧು

ಬಾಸೆಲ್, ಆಗಸ್ಟ್ 25: ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ಬಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಈ ಟೂರ್ನಿಯಲ್ಲಿ ಸಿಂಧು ಸತತ 3ನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದಂತಾಗಿದೆ.
ಶನಿವಾರ (ಆಗಸ್ಟ್ 24) ನಡೆದ ಮಹಿಳಾ ವಿಭಾಗದ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸಿಂಧು, ಆಲ್ ಇಂಗ್ಲೆಂಡ್ ಚಾಂಪಿಯನ್ ಚೈನೀಸ್ ಆಟಗಾರ್ತಿ ಚೆನ್ ಯು ಫೀ ಎದುರು 21-7, 21-14ರ ನೇರ ಸೆಟ್ ಗೆಲುವು ಸಾಧಿಸಿದರು. ಇಬ್ಬರ ಮಧ್ಯೆ 40 ನಿಮಿಷಗಳ ಕಾದಾಟ ನಡೆಯಿತು.
24ರ ಹರೆಯದ ಸಿಂಧು ಫೈನಲ್‌ನಲ್ಲಿ 2017ರ ವಿಜೇತೆ, ಜಪಾನ್‌ನ ನಝೋಮಿ ಒಕುಹರಾ ವಿರುದ್ಧ ಸ್ಪರ್ಧಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಒಕುಹರಾ, ಥೈಲ್ಯಾಂಡ್‌ನ ರಾಟ್ಚನೋಕ್ ಇಂಟಾನನ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 2018ರ ಫೈನಲ್‌ನಲ್ಲಿ ಸಿಂಧು ಸ್ಪೇನ್ ಬಲಿಷ್ಠೆ ಕೆರೋಲಿನ ಮರಿನ್ ಎದುರು ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು.
Story first published: Sunday, August 25, 2019, 2:43 [IST]
Other articles published on Aug 25, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications