PV Sindhu: ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ ಸಿಂಧು? ಮದುವೆ ಯಾವಾಗ?
ಭಾನುವಾರ ನಡೆದ ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಮೊಘ ಪ್ರದರ್ಶನ ನೀಡಿದ್ದ ಪಿವಿ ಸಿಂಧು ಪ್ರಶಸ್ತಿ ಪಡೆದು ಸುದ್ದಿಯಲ್ಲಿದ್ದರು. ಈಗ ಮತ್ತೊಂದು ಸುದ್ದಿ ಅವರಿಗೆ ಸಂಬಂಧಿಸಿದಂತೆ ಹೊರ ಬರುತ್ತಿದೆ. ಸಿಂಧು ಅವರ ಮದುವೆ ದಿನಾಂಕ ಬಹಿರಂಗವಾಗಿದೆ. ಡಿಸೆಂಬರ್ 20 ರಿಂದ ವಿವಾಹ ಸಮಾರಂಭ ಆರಂಭವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಡಿಸೆಂಬರ್ ಮೂರನೇ ವಾರ ಪೂರ್ತಿ ಬ್ಯಾಡ್ಮಿಂಟನ್ ತಾರೆಯರ ಮನೆಯಲ್ಲಿ ವಿವಾಹ ಸಂಬಂಧ ಕಾರ್ಯಕ್ರಮಗಳು ನಡೆಯಲಿವೆ.
ಪಿವಿ ಸಿಂಧು ಅವರ ಮದುವೆ ಉದಯಪುರದಲ್ಲಿ ಡಿಸೆಂಬರ್ 24 ರಂದು ನಡೆಯಲಿದ್ದು, ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಸಿಂಧು ಅವರೊಂದಿಗೆ ಸಪ್ತ ಪದಿ ತುಳಿಯುತ್ತಿರುವ ವಧು, ವೆಂಕಟ್ ದತ್ತಾ ಸಾಯಿ. ಸದ್ಯ ಇವರು ಪೊಸಿಡೆಕ್ಸ್ ಟೆಕ್ನಾಲಜೀಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಡಿಸೆಂಬರ್ 1ರಂದು ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಚೀನಾದ ವು ಲುವೊ ಯು ಅವರನ್ನು ಸಿಂಧು ಮಣಿಸಿದ್ದರು. ಈ ಮೂಲಕ ಪ್ರಸಕ್ತ ವರ್ಷದ ಅಂತ್ಯದಲ್ಲಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಲಯಕ್ಕೆ ಮರಳಿದ್ದರು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸಿಂಧು 21-14, 21-16 ರಿಂದ ಚೀನಾ ಆಟಗಾರ್ತಿಯ ಸವಾಲನ್ನು ಮೆಟ್ಟಿ ನಿಂತಿದ್ದರು. ಇದೇ ಟೂರ್ನಿಯ ಪುರಷರ ಸಿಂಗಲ್ಸ್ ಪ್ರಶಸ್ತಿಯನ್ನು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಪಡೆದಿದ್ದರು.
ಸಿಂಧು ಸಾಧನೆ
ಭಾರತದ ಪರ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಡಬಲ್ ಪದಕ ಸಾಧನೆ ಮಾಡಿದ ಕ್ರೀಡಾ ಪಟು ಎಂಬ ಹೆಗ್ಗಳಿಕೆ ಪಿವಿ ಸಿಂಧು ಅವರದ್ದಾಗಿದೆ. ಇವರು ರಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದರು. ಇನ್ನು ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ. ಅಲ್ಲದೆ ಎರಡು ಬೆಳ್ಳಿ, ಎರಡು ಕಂಚಿನ ಪದಕವನ್ನು ಪಡೆದು ಬೀಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications