ಚೀನಾ ಓಪನ್: ವಿಶ್ವ ನಂ.1 ಶ್ರೇಯಾಂಕಿತ ಕೆಂಟೊ ಮೊಮೊಟಾ ಚಾಂಪಿಯನ್

ಫುಝೌ, ನವೆಂಬರ್ 11: ವಿಶ್ವ ಚಾಂಪಿಯನ್, ಜಪಾನ್ ಆಟಗಾರ ಕೆಂಟೊ ಮೊಮೊಟಾ ಅವರು ಚೀನಾದ ಫುಝೌನಲ್ಲಿ ನಡೆದ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಚೌ ಟಿನ್-ಚೆನ್ ಅವರನ್ನು ಸೋಲಿಸಿ ಕೆಂಟೊ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಭಾನುವಾರ (ನವೆಂಬರ್ 11) ನಡೆದ ಪುರುಷರ ಸಿಂಗಲ್ಸ್ ಫೈನಲ್ ಸ್ಪರ್ಧೆಯಲ್ಲಿ ಜಪಾನ್ ಬಲಾಡ್ಯ ಮೊಮೊಟಾ, ತೈವಾನ್ ಆಟಗಾರ ಚೌ ಟಿನ್-ಚೆನ್ ಅವರನ್ನು 21-13, 11-21, 21-16 ಅಂತರದಿಂದ ಹಿಮ್ಮೆಟ್ಟಿಸಿದರು. ಇಬ್ಬರ ನಡುವೆ ಸುಮಾರು 66 ನಿಮಿಷಗಳ ಕಾಳಗ ನಡೆಯಿತು.
24ರ ಹರೆಯದ ಕೆಂಟೊ ಈ ವರ್ಷದುದ್ದಕ್ಕೂ ಚಾಂಪಿಯನ್ ಆಗಿಯೇ ಹೊರಹೊಮ್ಮಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್, ಏಷ್ಯಾ ಚಾಂಪಿಯನ್ ಶಿಪ್ ನಲ್ಲೂ ಕೆಂಟೊ ಪ್ರಶಸ್ತಿ ಜಯಿಸಿದ್ದರು. ಒಟ್ಟಾರೆ ವರ್ಲ್ಡ್ ಟೂರ್ ಸ್ಪರ್ಧೆಗಳಲ್ಲಿ ನಾಲ್ಕು ಬಾರಿ ಚಾಂಪಿಯನ್ ಎನಿಸಿದ ಹಿರಿಮೆ ಮೊಮೊಟಾ ಅವರದ್ದು.
Story first published: Sunday, November 11, 2018, 21:09 [IST]
Other articles published on Nov 11, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications