ಐತಿಹಾಸಿಕ ಸಾಧನೆ ಮಾಡಿದ ಸಿಂಧು, ಗೋಪಿಚಂದ್‌ಗೆ ಪುರಸ್ಕಾರ
ನವದೆಹಲಿ, ಆಗಸ್ಟ್, 19: ಐತಿಹಾಸಿಕ ಸಾಧನೆ ಮಾಡಿದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಮತ್ತು ಅದಕ್ಕೆ ಕಾರಣರಾದ ಕೋಚ್ ಪುಲ್ಲೆಲಾ ಗೋಪಿಚಂದ್ ಅವರಿಗೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ನಗದು ಪುರಸ್ಕಾರವನ್ನು ಘೋಷಣೆ ಮಾಡಿದೆ.
ದೇಶಕ್ಕೆ ಹೆಮ್ಮೆ ತಣದ ಕ್ರೀಡಾಪಟು ಮತ್ತು ಅದಕ್ಕೆ ಕಾರಣರಾದ ಕೋಚ್ ರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಅಖಿಲೇಶ್ ದಾಸ್ ಹೇಳಿದ್ದಾರೆ.[ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ 'ಬೆಳ್ಳಿ' ಸಿಂಧೂರ]

ಪಿ ವಿ ಸಿಂಧು ಅವರಿಗೆ 50 ಲಕ್ಷ ರು. ಮತ್ತು ಗೋಪಿಚಂದ್ ಅವರಿಗೆ 10ಲಕ್ಷ ರು. ನಗದು ಪುರಸ್ಕಾರವನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಅಸೋಸಿಯೇಷನ್ ತಿಳಿಸಿದೆ.[ಬೆಳ್ಳಿ ಗೆದ್ದ ಕುವರಿಗೆ ಅಭಿನಂದನೆಗಳ ವಂದನೆ]

ಬ್ಯಾಡ್ಮಿಂಟನ್ ನಲ್ಲಿ ಸಿಂಧು ಗೆದ್ದ ಬೆಳ್ಳಿ ಭಾರತಕ್ಕೆ ಮೊದಲ ಬೆಳ್ಳಿ. ಸೈನಾ ನೆಹ್ವಾಲ್ ಕಂಚು ಗೆದ್ದಿದ್ದು ಹಿಂದಿನ ಸಾಧನೆ. ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಪಿವಿ ಸಿಂಧು ಮತ್ತು ಪದ್ಮ ಭೂಷಣ ಗೋಪಿಚಂದ್ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ ಎಂದು ಡಾ. ಅಖಿಲೇಶ್ ದಾಸ್ ತಿಳಿಸಿದ್ದಾರೆ.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications