ರಷ್ಯಾ ಬ್ಯಾಡ್ಮಿಂಟನ್ ಆಟಗಾರ ನಿಕಿತಾ ಖಾಕಿಮೋವ್‌ಗೆ 5 ವರ್ಷಗಳ ನಿಷೇಧ

ಬರ್ಲಿನ್: ರಷ್ಯಾದ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ ನಿಕಿತಾ ಖಾಕಿಮೋವ್‌ಗೆ 5 ವರ್ಷಗಳ ನಿಷೇಧ ಹೇರಲಾಗಿದೆ. ಬೆಟ್ಟಿಂಗ್‌ಗೆ ಸಂಬಂಧಿಸಿ ತಪ್ಪನ್ನೆಸಗಿರುವುದು ಸಾಭೀತಾಗಿರುವುದರಿಂದ ನಿಕಿತಾಗೆ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಬುಧವಾರ (ಡಿಸೆಂಬರ್ 23) ನಿಕಿತಾಗೆ ನಿಷೇಧ ಹೇರಿದೆ.
ಕಳೆದ 2018ರ ಫೆಬ್ರವರಿಯಲ್ಲಿ ನಡೆದ ಯುರೋಪಿಯನ್ ತಂಡಗಳ ಚಾಂಪಿಯನ್‌ಶಿಪ್‌ನಲ್ಲಿ ಫಲಿತಾಂಶವನ್ನು ಮೊದಲೇ ನಿರ್ಧರಿಸುವಂತೆ ಅಥವಾ ಬದಲಾಯಿಸುವಂತೆ ಒತ್ತಾಯಿಸಿರುವುದಾಗಿ ಒಬ್ಬರು ನಿಕಿತಾ ಖಾಕಿಮೋವ್ ವಿರುದ್ಧ ದೂರಿತ್ತ ಬಳಿಕ ಬಿಡಬ್ಲ್ಯೂಎಫ್ ತನಿಖೆ ನಡೆಸಿತ್ತು.
ಸ್ವತಂತ್ರ ಸಮಿತಿಯು ಖಾಕಿಮೊವ್ ಬಿಡಬ್ಲ್ಯೂಎಫ್‌ನ ಸಮಗ್ರತೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮನಗಂಡಿದೆ. ಖಾಕಿಮೊವ್ ಮಾಡಿದ ಅಪರಾಧಗಳಲ್ಲಿ ಆಟಗಾರನಿಗೆ ಹಣದ ಆಮಿಷವೊಡ್ಡಿ ಫಲಿತಾಂಶ ಬದಲಿಸುವಂತೆ ಕೇಳಿಕೊಂಡಿದ್ದು, ಬ್ಯಾಡ್ಮಿಂಟನ್ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದು ಕೂಡ ಸೇರಿದೆ ಎಂದು ತಿಳಿದುಬಂದಿದೆ.
32ರ ಹರೆಯದ ಖಾಕಿಮೊವ್ 2020ರ ಯುರೋಪಿಯನ್ ತಂಡಗಳ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications