ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ವಿಶ್ವಾಸದಲ್ಲಿ ಸೈನಾ ನೆಹ್ವಾಲ್

ಆಕ್ಲೆಂಡ್, ಏಪ್ರಿಲ್ 30: ವಿಶ್ವದ ಮಾಜಿ ನಂ.1 ಆಟಗಾರ್ತಿ ಭಾರತದ ಸೈನಾ ನೆಹ್ವಾಲ್, ಇತ್ತೀಚೆಗೆ ಅಂತ್ಯಗೊಂಡ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ಸ್‌ನ ವೈಫಲ್ಯವನ್ನು ಮರೆತು ಇಲ್ಲಿ ಮಂಗಳವಾರ ಆರಂಭವಾಗಲಿರುವ ನ್ಯೂಜಿಲೆಂಡ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಅಖಾಡಕ್ಕಿಳಿಯಲಿದ್ದಾರೆ.
29 ವರ್ಷದ ಅನುಭವಿ ಆಟಗಾರ್ತಿ ಸೈನಾ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದು, ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವ್ಯಾಂಗ್ ಝೀಯಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ವಿಶ್ವದ 9ನೇ ಶ್ರೇಯಾಂಕ ಹೊಂದಿರುವ ಸೈನಾ, ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದ ಏಕಮಾತ್ರ ಭಾರತೀಯ ಮಹಿಳಾ ಆಟಗಾರ್ತಿ ಎನಿಸಿದ್ದಾರೆ. ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದ ಸೈನಾ, ಇದೀಗ ಕಿವೀಸ್ ನೆಲದಲ್ಲಿ ವರ್ಷದ ಎರಡನೇ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದ್ದಾರೆ.
ಇನ್ನು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಮುಗ್ಗರಿಸಿದ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧೂ, ನ್ಯೂಜಿಲೆಂಡ್ ಓಪನ್‌ನಿಂದ ದೂರ ಉಳಿದಿದ್ದಾರೆ. ಆದರೆ, ಯುವ ಪ್ರತಿಭೆ ಅರುಣಾ ಪ್ರಭುದೇಸಾಯಿ ಕಣದಲ್ಲಿದ್ದು, ಪ್ರಥಮ ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಚೀನಾದ ಲೀ ಕ್ಸುರುಯಿ ಅವರ ಕಠಿಣ ಸವಾಲನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅನುಭವಿಗಳಾದ ಬಿ ಸಾಯ್ ಪ್ರಣೀತ್, ಎಚ್.ಎಸ್ ಪ್ರಣೋಯ್ ಹಾಗೂ ಶುಭಾಂಕರ್ ಡೇ ಪ್ರಧಾನ ಘಟ್ಟಕ್ಕೆ ನೇರ ಅರ್ಹತೆ ಪಡೆದರೆ, ಮತ್ತೊಂದೆಡೆ ಅಜಯ್ ಜಯರಾಮ್, ಪರುಪಳ್ಳಿ ಕಶ್ಯಪ್ ಮತ್ತು ಲಕ್ಷ್ಯ ಸೇನ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications