ಫ್ರೆಂಚ್ ಓಪನ್: ಭಾರತಕ್ಕೆ ಪ್ರಶಸ್ತಿ ಗೆಲ್ಲುವತ್ತ ಸೈನಾ, ಸಿಂಧು, ಶ್ರೀಕಾಂತ್ ಚಿತ್ತ

ಪ್ಯಾರೀಸ್, ಅಕ್ಟೋಬರ್ 22: ಫ್ರಾನ್ಸ್ ನ ಪ್ಯಾರೀಸ್ ನಲ್ಲಿ ಆರಂಭಗೊಳ್ಳಲಿರುವ ಪ್ರತಿಷ್ಠಿತ ಫ್ರೆಂಚ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವತ್ತ ಭಾರತದ ಭರವಸೆಯ ಆಟಗಾರರಾದ ಸೈನಾ ನೆಹ್ವಾಲ್, ಪಿವಿ ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಚಿತ್ತ ನೆಟ್ಟಿದ್ದಾರೆ.
ಭಾನುವಾರ (ಅಕ್ಟೋಬರ್ 21) ಮುಕ್ತಾಯಗೊಂಡ ಡೆನ್ಮಾರ್ಕ್ ಓಪನ್ ಟೂರ್ನಿಯ ಫೈನಲ್ ನಲ್ಲಿ ಸೈನಾ, ವಿಶ್ವ ನಂ. 1 ಆಟಗಾರ್ತಿ ಚೈನೀಸ್ ತೈಪೆಯ ತಾಯ್ ತ್ಸು ಯಿಂಗ್ ಅವರ ವಿರುದ್ಧ 13-21, 21-13, 6-21ರಿಂದ ಸೋಲುವ ಮೂಲಕ ರನ್ನರ್ಸ್ ಗೆ ತೃಪ್ತಿಪಟ್ಟಿದ್ದರು. ಹೀಗಾಗಿ ಫ್ರೆಂಚ್ ಓಪನ್ ಗೆದ್ದುಕೊಳ್ಳುವತ್ತ ಸೈನಾ ಕಣ್ಣಿಟ್ಟಿದ್ದಾರೆ.
ಡೆನ್ಮಾರ್ಕ್ ಓಪನ್ ನಲ್ಲಿ ಫೈನಲ್ ಗೂ ಮುನ್ನವೇ ಟೂರ್ನಿಯಿಂದ ಹೊರಬಿದ್ದಿದ್ದರಿಂದ ಸಿಂಧು, ಶ್ರೀಕಾಂತ್ ಫ್ರೆಂಚ್ ಓಪನ್ ನಲ್ಲಿ ಎಚ್ಚರಿಕೆಯ ಆಟ ಆಡುವುದರಲ್ಲಿದ್ದಾರೆ. ಡೆನ್ಮಾರ್ಕ್ ಫೈನಲ್ ಸ್ಪರ್ಧಿ ಸೈನಾ ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಅಕ್ಟೋಬರ್ 23ರಿಂದ 28ರ ವರೆಗೆ ಈ ಟೂರ್ನಿ ನಡೆಯಲಿದೆ.
Story first published: Monday, October 22, 2018, 18:04 [IST]
Other articles published on Oct 22, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications